ಅಫ್ಘಾನ್: ತಾಲಿಬಾನ್‌ನಿಂದ 16 ಬಸ್ ಪ್ರಯಾಣಿಕರ ಹತ್ಯೆ
ಕುಂಡುಝ್ (ಅಫ್ಘಾನಿಸ್ತಾನ), ಮೇ 31: ಉತ್ತರ ಅಫ್ಘಾನಿಸ್ತಾನದಲ್ಲಿ ಬಸ್‌ಗಳನ್ನು ನಿಲ್ಲಿಸಿದ ತಾಲಿಬಾನ್ ಭಯೋತ್ಪಾದಕರು ಕನಿಷ್ಠ 16 ಪ್ರಯಾಣಿಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿಯನ್ನು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವಾರ ತಾಲಿಬಾನ್‌ಗೆ ನೂತನ ನಾಯಕನ ನೇಮಕವಾದ ಬಳಿಕ ಭಯೋತ್ಪಾದಕರ ಹಿಂಸೆ ವಿಜೃಂಭಿಸಿದೆ.
ಸಂಘರ್ಷಪೀಡಿತ ರಾಜ್ಯ ಕುಂಡುಝ್‌ನ ಅಲಿಯಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆಯ ಬಗ್ಗೆ ತಾಲಿಬಾನ್ ಈ ತನಕ ಯಾವುದೇ ಹೇಳಿಕೆ ನೀಡಿಲ್ಲ.
‘‘ತಾಲಿಬಾನಿಗಳು 16 ಮಂದಿಯನ್ನು ಗುಂಡು ಹಾರಿಸಿ ಕೊಂದಿದ್ದಾರೆ ಹಾಗೂ 30ಕ್ಕೂ ಅಧಿಕ ಮಂದಿಯನ್ನು ಈಗಲೂ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ’’ ಎಂದು ಕುಂಡುಝ್ ರಾಜ್ಯದ ಗವರ್ನರ್‌ರ ವಕ್ತಾರರೋರ್ವರು ತಿಳಿಸಿದರು.
‘‘ಅವರು (ತಾಲಿಬಾನ್) ಕೆಲವು ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಹಲವಾರು ಮಂದಿಯನ್ನು ಈಗಲೂ ಹಿಡಿದಿಟ್ಟುಕೊಂಡಿದ್ದಾರೆ. ಯಾವುದೇ ಪ್ರಯಾಣಿಕರು ಸೇನಾ ಸಮವಸ್ತ್ರವನ್ನು ತೊಟ್ಟಿರಲಿಲ್ಲ. ಆದರೆ, ಕೆಲವರು ಮಾಜಿ ಪೊಲೀಸರಾಗಿರಬಹುದು’’ ಎಂದರು.