×
Ad

ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ವಿಜಯ್ ಮಲ್ಯ

Update: 2016-05-31 21:57 IST

ಲಂಡನ್ , ಮೇ 31 : ಭಾರತದ 12 ಬ್ಯಾಂಕುಗಳಿಗೆ ಸುಮಾರು ೯ ಸಾವಿರ ಕೋಟಿ ಬಾಕಿ ಇಟ್ಟು ಲಂಡನ್ ಸೇರಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕೆ ತರಲು ಕೇಂದ್ರ ಸರಕಾರ ಹೆಣಗಾಡುತ್ತಿದೆ. ಆದರೆ ಮಲ್ಯ ಲಂಡನ್ ನ ತನ್ನ ನಿವಾಸದಲ್ಲಿ ತನ್ನ ಪುತ್ರ ಹಾಗು ಮಿತ್ರರ ಜೊತೆ ಹಾಯಾಗಿ ಕುಳಿತು ಐಪಿಎಲ್ ಫೈನಲ್ ಪಂದ್ಯವನ್ನು ನೋಡಿ ಮಜಾ ಮಾಡುವ ವೀಡಿಯೋ ಈಗ ವೈರಲ್ ಆಗಿದೆ.  
ಈ ವೀಡಿಯೋ ವನ್ನು ಮಲ್ಯರ ಪುತ್ರ ಸಿದ್ಧಾರ್ಥ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಲ್ಯ , ಅವರ ಪುತ್ರ ಅತ್ಯಂತ ಮಜಾ ಮೂಡ್ ನಲ್ಲಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ರವಿವಾರವೇ ನಡೆದ ಮೊನಾಕೊ ಗ್ರಾಂಡ್ ಪ್ರಿಕ್ಸ್ ನಲ್ಲಿ ಫೋರ್ಸ್ ಇಂಡಿಯಾ ಮೂರನೇ ಸ್ಥಾನ ಪಡೆದಿದ್ದು ಮಲ್ಯದ್ವಯರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. 
“Here we are, watching together from London. It doesn’t get better than Sergio Perez getting a podium (for Mallya co-owned Force India). Hopefully we can add to what has been an epic day of sports so far,”  ಎಂದು ಸಿದ್ಧಾರ್ಥ ವೀಡಿಯೋದಲ್ಲಿ ಹೇಳಿದ್ದಾರೆ. 
ಬಳಿಕ ವಿಜಯ್ ಮಲ್ಯಗೆ ಕ್ಯಾಮರ ಹಿಡಿದಾಗ “go RCB” ಎಂದು ಸೀನಿಯರ್ ಮಲ್ಯ ಹೇಳಿ ತಮ್ಮ ತಂಡವನ್ನು ಹುರಿದುಂಬಿಸಿದ್ದಾರೆ. 


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News