×
Ad

ಉತ್ತಮ ಶಿಕ್ಷಣದಿಂದ ಉತ್ತುಂಗ ಸ್ಥಾನ: ಡಾ. ಆ್ಯಂಟನಿ ಪ್ರಕಾಶ್

Update: 2016-05-31 23:23 IST

ಪುತ್ತೂರು, ಮೇ 31: ಶಿಕ್ಷಣವು ಮಾನವನ ಜೀವನವನ್ನು ಪರಿಪೂರ್ಣಗೊಳಿಸುವ ಒಂದು ಸಾಧನ. ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದಲ್ಲಿ ಉತ್ತುಂಗ ಶಿಖರವನ್ನು ಏರಲು ಸಾಧ್ಯವಿದೆ ಎಂದು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ.ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದ್ದಾರೆ.

ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಮತ್ತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಕಾಂರ್ುಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ನೀತಿ ನಿಯಮಗಳ ಕುರಿತು ವಿವರಿಸಿದರು. ಸಿಇಟಿಯಲ್ಲಿ ಅತ್ಯತ್ತಮ ರ್ಯಾಂಕ್ ಗಳಿಸಿದ ವಿರಾಜ್ ಡೇನಿಯಲ್ ಡಿ’ಸೋಜ ಮತ್ತು ರಾಯನ್ ಮೆಕ್ಲೀನ್ ಡಿ’ಸೋಜರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಆಂಗ್ಲಭಾಷಾ ಉಪನ್ಯಾಸಕಿ ಸತ್ಯಲತಾ ಸ್ವಾಗತಿಸಿದರು. ಡಿಂಪಲ್ ಲೋಬೊ ವಂದಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಡಿಂಪಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

ರಸಾಯನಶಾಸ್ತ್ರ ಉಪನ್ಯಾಸಕ ಪ್ರಶಾಂತ ಭಟ್ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಸ್ಟೆಲ್ಲಾ ಜೆಸ್ನ ಲೆವಿಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News