×
Ad

ಕಾಸರಗೋಡು: ಬಸ್ ಪ್ರಯಾಣಿಕೆಯ ಚಿನ್ನಾಭರಣ ಕಳವು

Update: 2016-06-01 14:46 IST

ಕಾಸರಗೋಡು, ಜೂ.1: ಬಸ್ ಪ್ರಯಾಣಿಕೆಯ  ಹತ್ತು ಪವನ್ ಚಿನ್ನಾಭರಣ ಕಳವಾದ ಘಟನೆ  ಬದಿಯಡ್ಕ ದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ  ಮುಳ್ಳೇರಿಯ ದಿಂದ  ಬದಿಯಡ್ಕ ಕ್ಕೆ  ಖಾಸಗಿ ಬಸ್ ನಲ್ಲಿ  ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

 ಮುಳ್ಳೇರಿಯ   ಅಡ್ಕದ ರೇಖಾ ಚಿನ್ನಾಭರಣ ಕಳಕೊಂಡವರು ಎಂದು ಗುರುತಿಸಲಾಗಿದೆ.  ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ತನ್ನ ಮಗುವಿನ ಜೊತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ  ನಡೆದಿದ್ದು , ಬದಿಯಡ್ಕಕ್ಕೆ   ತಲುಪಿದಾಗ  ಚಿನ್ನಾಭರಣ ಕಳವಾಗಿರುವುದು  ರೇಖಾಳ ಗಮನಕ್ಕೆ ಬಂದಿದೆ.  ಕೂಡಲೇ ಬದಿಯಡ್ಕ ಪೊಲೀಸರಿಗೆ ದೂರು  ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News