×
Ad

ಜೂ.4 ರಂದು ನಡೆಯುವ ಪೊಲೀಸ್ ಹೋರಾಟಕ್ಕೆ ಎಎಪಿಯಿಂದ ಬೆಂಬಲ

Update: 2016-06-01 14:54 IST

ಹಾಸನ, ಜೂ. 1: ಪೊಲೀಸರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಜೂನ್ 4 ರಂದು ನಡೆಸಲಾಗುತ್ತಿರುವ ಹೋರಾಟಕ್ಕೆ ಎಎಪಿಯಿಂದ ಬೆಂಬಲ ನೀಡುವುದಾಗಿ ಅಪರ ಜಿಲ್ಲಾಧಿಕಾರಿ ಜಾನಕಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
     ಜನತೆಗೆ ರಕ್ಷಣೆ ಕೊಡುವ ಪೊಲೀಸರಿಗೆ ಯಾವ ಸೌಲಭ್ಯವಿಲ್ಲದೆ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು, ಅವರ ಹಕ್ಕುಗಳನ್ನು ಕಾಪಾಡುವಂತೆ ಒತ್ತಾಯಿಸಿದರು. ಬಹುತೇಕ ಇಲಾಖೆಗಳು ಬೆಳಗ್ಗೆಯಿಂದ ಸಂಜೆವರೆಗೂ ಮಾತ್ರ ಕೆಲಸದ ಅವಧಿ ಇದ್ದರೇ, ಪೊಲೀಸ್ ಇಲಾಖೆಯಲ್ಲಿ ದಿನದ 12 ರಿಂದ 18 ಗಂಟೆಗಳ ಕಾಲ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಬೇಕು ಆದರೇ ಕಡಿಮೆ ಸಂಬಳ ಪಡೆಯುತ್ತಿದ್ದಾರೆ ಎಂದರು.

ಯಾವುದೇ ರಾಜಕೀಯ, ಸಾರ್ವಜನಿಕ ಸಭಾ ಸಮಾರಂಭ ನಡೆದರೂ ಪೊಲೀಸರು ಇದ್ದೆ ಇರುತ್ತಾರೆ. ಸರ್ಕಾರಿ ರಜೆ ಬಹುತೇಕ ಇಲಾಖೆಗೆ ಇದ್ದರೂ ಪೊಲೀಸ್ ಇಲಾಖೆಗೆ ಹೆಚ್ಚುವರಿ ಕೆಲಸವೇ ಹೆಚ್ಚು ಎಂದರು. ಕೂಡಲೇ ಪೊಲೀಸರ ಬೇಡಿಕೆ ಈಡೇರಿಸಿ, ಜನಸಾಮಾನ್ಯರ ರಕ್ಷಣೆಗೆ ದಕ್ಕೆ ಬಾರದಂತೆ ನಡೆದುಕೊಳ್ಳುವಂತೆ  ಆಮ್ ಆದ್ಮಿ ಪಕ್ಷದ ಮುಖಂಡ ಅಕ್ಮಲ್ ಜಾವೀದ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News