×
Ad

ಕಣ್ಣೂರು: ಚುನಾವಣಾ ದ್ವೇಷ, ಬಾಲಕನಿಗೆ ತಲವಾರು ಬೀಸಿ ಪರಾರಿಯಾದ ಕ್ರೂರಿಗಳು!

Update: 2016-06-01 16:31 IST

ಕಣ್ಣೂರು, ಜೂನ್1: ರಾಜಕೀಯ ಪ್ರತಿಸ್ಪರ್ಧಿಯಾದ ತಂದೆ ಸಿಗದಿದ್ದಾಗ ಏಳು ವರ್ಷದ ಬಾಲಕನಿಗೆ ಕಡಿದು ಹಗೆ ತೀರಿಸಿದ ರಾಜಕೀಯ ಕ್ರೌರ್ಯದ ಪರಮಾವಧಿಯ ಘಟನೆಯೊಂದು ಕಣ್ಣೂರು ಜಿಲ್ಲೆಯ ಕಾಕಂಙಾಟ್ಟೆ ಎಂಬಲ್ಲಿಂದ ವರದಿಯಾಗಿದೆ. ಮನೆಯ ಜಗಲಿಯಲ್ಲಿ ಆಡುತ್ತಿದ್ದ ಪುಟ್ಟ ಬಾಲಕನ ಮೇಲೆ ತಲವಾರು ಬೀಸಿ ನಿರ್ದಯಿಗಳು ಪರಾರಿಯಾಗಿದ್ದಾರೆ.

ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಗಂಭೀರ ಗಾಯವಾಗಿತ್ತು. ಈ ಘಟನೆಯ ಆರೋಪಿಯನ್ನು ಬಾಲಕನ ತಂದೆ ರಾಹುಲ್ ಪೊಲೀಸರಿಗೆ ತೋರಿಸಿಕೊಟ್ಟಿದ್ದಾನೆಂದು ಭಾವಿಸಿರಾಹುಲ್‌ನ ವಿರುದ್ಧ ಹಗೆ ತೀರಿಸಲು ಗೂಂಡಾಗಳು ಬಂದಿದ್ದರು. ರಾಹುಲ್ ಸಿಗದಿದ್ದಾಗ ಆತನ ಏಳು ವರ್ಷ ವಯಸ್ಸಿನ ಪುಟ್ಟ ಬಾಲಕನಿಗೆ ತಲವಾರು ಬೀಸಿ ಹೋಗಿದ್ದಾರೆ.

ತಂಡ ಮರಳಿ ಹೋಗುತ್ತಿದ್ದಾಗ ಮನೆಮುಂದೆ ಆಡುತ್ತಿದ್ದ ರಾಹುಲ್‌ನ ಪುತ್ರ ಕಾರ್ತಿಕ್‌ನ ತಲೆಯನ್ನು ಗೋಡೆಗೆ ಬಡಿದು ನಂತರ ತಲವಾರು ಬೀಸಿ ಹೋಗಿದ್ದಾರೆ. ಮಗುವಿನ ಅಳು ಕೇಳಿ ಮನೆಯೊಳಗಿದ್ದವರು ಓಡಿ ಬಂದಿದ್ದರು. ಬಾಲಕನ ಬೆರಳಿಗೆ ಗಾಯವಾಗಿತ್ತು. ನೆರೆಯವರು ಬಂದು ಸೇರುವಷ್ಟರಲ್ಲಿ ತಂಡ ಪರಾರಿಯಾಗಿತ್ತು. ಕಣ್ಣೂರು ಜಿಲ್ಲೆಯಲ್ಲಿ ರಾಜಕೀಯ ಹಗೆತನ ಮಕ್ಕಳ ಮೇಲೆ ತೀರಿಸುತ್ತಿರುವ ಘಟನೆಯಲ್ಲಿ ಹೆಚ್ಚಳವಾಗುತ್ತಿದೆ. ಪಾಲಂ ಸೆಕೆಂಡರಿಸ್ಕೂಲ್‌ನಲ್ಲಿಎರಡನೆ ತರಗತಿ ವಿದ್ಯಾರ್ಥಿಯಾದ ಕಾರ್ತಿಕ್‌ನನ್ನು ಇಂದಿರಾಗಾಂಧಿ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಕಾರ್ತಿಕ್‌ನ ಅಜ್ಜಿ ಕಳೆದ ಪಂಚಾಯತ್ ಚುನಾವಣೆಯಲ್ಲಿ ಮುಝುಕುನ್ನು ಪಂಚಾಯತ್‌ನ ಹದಿನಾಲ್ಕನೆ ವಾರ್ಡ್‌ಗೆ ಸ್ಪರ್ಧಿಸಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News