ಬಾವಿ ದುರಸ್ತಿ ವೇಳೆ ಮಣ್ಣು ಕುಸಿತ: ಮಣ್ಣಿನಡಿ ಸಿಲುಕಿದ ಕಾರ್ಮಿಕ
Update: 2016-06-01 17:00 IST
ಕಾಸರಗೋಡು, ಜೂ. 1: ಬಾವಿ ಸ್ವಚ್ಛಗೊಳಿಸುತ್ತಿದ್ದಾಗ ಮಣ್ಣು ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿ ಇಬ್ಬರು ಪಾರಾದ ಘಟನೆ ಮಧೂರು ಸಮೀಪದ ಉಳಿಯತ್ತಡ್ಕದಲ್ಲಿ ನಡೆದಿದೆ.
ಮೋಹನ್ ನಾಯ್ಕ್ ಮಣ್ಣಿನಡಿ ಸಿಲುಕಿದ ಕಾರ್ಮಿಕ. ಈಶ್ವರ ನಾಯ್ಕ್ ಸೇರಿದಂತೆ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾದ ಮೋಹನ್ ನಾಯ್ಕ್ರಿಗಾಗಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.
ಉಳಿಯತ್ತಡ್ಕದ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಬಾವಿ ದುರಸ್ತಿ ನಡೆಸುತ್ತಿದ್ದಾಗ ಮೇಲ್ಬಾಗದಿಂದ ಮಣ್ಣು ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ಮೋಹನ್ ಮತ್ತು ಇತರ ಇಬ್ಬರು ಬಾವಿಗೆ ಇಳಿದಿದ್ದರು. ಅವಶೇಷಗಳಡಿ ಸಿಲುಕಿದ ಮೋಹನ್ ರನ್ನು ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ.