ಮಳೆಗಾಲ ಪೂರ್ವದ ಮೊದಲ ಮಳೆಗೆ ನಗರದಲ್ಲಿ ಕೃತಕ ನೆರೆ

Update: 2016-06-01 14:35 GMT

ಮಂಗಳೂರು, ಜೂ. 1:ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಕಡೆಗಳಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿದೆ. ಸ್ಮಾರ್ಟ್ ಸಿಟಿಯಾಗುವತ್ತ ಹೆಜ್ಜೆಯಿಡುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಮಂಗಳವಾರ ಸುರಿದ ಮಳೆ ನಗರದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿಯನ್ನು ಹುಟ್ಟಿಸಿದೆ.

 ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ರಸ್ತೆಗಳಲ್ಲಿ ಚರಂಡಿಯಲ್ಲಿ ನೀರು ಹರಿಯುವಂತೆ ರಸ್ತೆಯ ನಡುವೆ ನೀರು ಹರಿಯುತ್ತಿದ್ದ ದೃಶ್ಯ ನಗರದ ಅಂಬೇಡ್ಕರ್ ವೃತ್ತ, ಬಲ್ಮಠ, ಬಂಟ್ಸ್ ಹಾಸ್ಟೆಲ್ ಬಳಿ ಕಂಡು ಬಂತು.
  
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಹಾಗೂ ಜಪ್ಪಿನಮೊಗರು ಬಳಿಯ ರಾಷ್ಟ್ರೀಯ ಹೆದ್ದಾರಿ,ಕಲ್ಲಾಪು ,ಜಪ್ಪಿನಮೊಗರು ಬೈಪಾಸ್ ರಸ್ತೆ, ಉಳ್ಳಾಲ ನೇತ್ರಾವತಿ ನದಿಗೆ ನಿರ್ಮಿಸಲಾದ ಹೊಸ ಸೇತುವೆಯ ಬದಿಯಲ್ಲಿ ನೀರು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಸಂಚಾರಕ್ಕೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಾಣವಾಗಬೇಕಾಗಿದ್ದ ಚರಂಡಿ ಹಲವು ಕಡೆ ಪೂರ್ಣಗೊಳ್ಳದೆ ಕೇವಲ ಕಾಂಕ್ರೀಟ್ ರಸ್ತೆ ಮಾತ್ರ ನಿರ್ಮಾಣಗೊಂಡಿರುವುದು ಈ ರೀತಿಯ ಕೃತಕ ನೆರೆ ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News