×
Ad

ನಂತೂರು: ಪರಿಹಾರ ಕಾಣದ ಟ್ರಾಫಿಕ್ ಸಮಸ್ಯೆ!

Update: 2016-06-01 21:21 IST

ಮಂಗಳೂರು, ಜೂ. 1: ಹೆದ್ದಾರಿಗಳ ಸಹಿತ ನಾಲ್ಕು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ನಂತೂರು ಜಂಕ್ಷನ್‌ನಲ್ಲಿ ಇಂದು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ನಾಗರಿಕರು ಪರಿದಾಡಿದ ಘಟನೆ ನಡೆದಿದೆ.

ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ನಂತೂರು ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಬಿಟ್ಟಿದೆ. ಪ್ರಯಾಣಿಕರನ್ನು ನಿರಂತರವಾಗಿ ಕಾಡುವ ಈ ಸಂಚಾರ ಅಡಚಣೆಗೆ ಸದ್ಯಕ್ಕೆ ಶಾಶ್ವತ ಪರಿಹಾರ ಕಾಣುತ್ತಿಲ್ಲ. ಟ್ರಾಫಿಕ್ ಜಾಮ್ ತಪ್ಪಿಸಲು ನಂತೂರು ವೃತ್ತದಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಅತಿಯಾದ ವಾಹನ ದಟ್ಟಣೆಯಿಂದಾಗಿ ಮುಕ್ತ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News