×
Ad

ಭಟ್ಕಳ: ಕೊಂಕಣ ರೈಲ್ವೆಯ ರೈಲ್ ಹಮ್‌ಸಫರ್ ಸಪ್ತಾಹ ಯಶಸ್ವಿ

Update: 2016-06-01 23:25 IST

ಭಟ್ಕಳ, ಜೂ.1 : ಕೊಂಕಣ ರೈಲ್ವೆ ಕಾರ್ಪೋರೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ರೈಲ್ ಹಮ್‌ಸಫರ್ ಸಪ್ತಾಹ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಳೆದ 26ರಿಂದ ಆರಂಭವಾದ ಸಪ್ತಾಹ ಕಾರ್ಯಕ್ರಮ ಜೂನ್ 1ರಂದು ಅಂತ್ಯಗೊಂಡಿದ್ದು, ಈ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ವಿವಿಧ ನಿಲ್ದಾಣಗಳಲ್ಲಿ ಸಚ್ಛತಾ ಕಾರ್ಯಗಳನ್ನು ಹಾಗೂ ಇತರ ಜನೋಪಯೋಗಿ ಕಾರ್ಯಗಳನ್ನು ಮಾಡಲಾಯಿತು.

ಭಟ್ಕಳ ಹಾಗೂ ಮುರ್ಡೇಶ್ವರ ರೈಲ್ವೇ ನಿಲ್ದಾಣಗಳಲ್ಲಿ ರೈಲ್ ಹಮ್‌ಸಪರ್ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ದಿವಸ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.

ರೈಲ್ವೆ ಅಧಿಕಾರಿ ವರ್ಗದಿಂದ ಸಿಬ್ಬಂದಿಯವರೆಗೆ ಎಲ್ಲರೂ ಕೂಡಾ ಸ್ವಚ್ಛತಾ ದಿವಸ್ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News