×
Ad

ಕಿನ್ನಿಗೋಳಿ: ವಿವಿಧ ಕಾಮಗಾರಿಗಳಿಗೆ ಸಚಿವ ಜೈನ್ ಚಾಲನೆ

Update: 2016-06-01 23:31 IST

ಕಿನ್ನಿಗೋಳಿ, ಜೂ.1: ಇಲ್ಲಿನ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1.6 ಕೋ.ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.

49 ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಗೋಳಿ ಮಾರ್ಕೆಟ್ ಬಳಿಯ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಹಂತದ ಕಾಮಗಾರಿ ಉದ್ಘಾಟನೆ, 3 ಲಕ್ಷ ರೂ. ವೆಚ್ಚದ ನಾಯರ್‌ಕೆರೆ ಅಭಿವೃದ್ಧಿ, 5.35 ಲಕ್ಷ ರೂ. ವೆಚ್ಚದ ಶಾಂತಿಪಲ್ಕೆ ರಸ್ತೆ ಡಾಂಬರೀಕರಣ ಮತ್ತು ಅಭಿವೃದ್ಧಿ, 20 ಲಕ್ಷ ರೂ. ವೆಚ್ಚದಲ್ಲಿ ಗುತ್ತಕಾಡು ಭಾಗದ 2 ರಸ್ತೆ ಕಾಂಕ್ರಿಟೀಕರಣ, 5 ಲಕ್ಷ ರೂ. ವೆಚ್ಚದ ಗುತ್ತಕಾಡು ರಸ್ತೆ ಕಾಂಕ್ರಿಟ್, 4.60 ಲಕ್ಷ ರೂ. ವೆಚ್ಚದಲ್ಲಿ ಗುತ್ತಕಾಡಿನಲ್ಲಿ 2 ರಸ್ತೆಗೆ ಡಾಮರು ಮತ್ತು ಅಭಿವೃದ್ಧಿ, 3 ಲಕ್ಷ ರೂ. ವೆಚ್ಚದಲ್ಲಿ ಗುತ್ತಕಾಡು ಪ.ಪಂಗಡ ಕಾಲನಿ ರಸ್ತೆಗೆ ಕಾಂಕ್ರಿಟ್, 12.80 ಲಕ್ಷ ರೂ. ವಚ್ಚದಲ್ಲಿ ಕುಜಿಂಗಿರಿ ರಕ್ತೇಶ್ವರಿ ದೈವಸ್ಥಾನ ರಸ್ತೆ ಡಾಮರು ಮತ್ತು ಅಭಿವೃದ್ಧಿ, 3.50 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್ ಆವರಣಕ್ಕೆ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗಳನ್ನು ಉದ್ಘಾಟಿಸಿದರು.

ಬಳಿಕ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಸಚಿವರು, ಕಿನ್ನಿಗೋಳಿ ಮತ್ತು ಹಳೆಯಂಗಡಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಗ್ರಾಪಂಗಳು. ಉದ್ಯೋಗ ಖಾತ್ರಿ ಯೋಜನೆಯನ್ನು ಪಂಚಾಯತ್ ಅಭಿವೃದ್ಧಿ ಅಕಾರಿ ಗಳು, ಅಧ್ಯಕ್ಷರು ಮತ್ತು ಸದಸ್ಯರು ಉತ್ತಮ ರೀತಿಯಲ್ಲಿ ಬಳಸಿಕೊಂಡು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಪಣತೊಡಬೇಕು ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರಾಜ್ಯದಲ್ಲಿಯೇ ಕಿನ್ನಿಗೋಳಿಯಲ್ಲಿ ಮೊಟ್ಟಮೊದಲು ಕಾರ್ಯಾಚರಿಸುವಂತಾ ಗಲಿದೆ. ಕಾಮಗಾರಿ ಸಂಪೂರ್ಣಗೊಂಡ ಬಳಿಕ ಈ ಬಗ್ಗೆ ಇರುವ ಆರೋಪ, ದೂರುಗಳನ್ನು ಲೋಕಾಯುಕ್ತ ಅಥವಾ ಯಾವುದೇ ಸಂಸ್ಥೆಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಕಾರಿಗಳನ್ನು ವಿನಂತಿಸಿರುವುದಾಗಿ ಸಚಿವರು ತಿಳಿಸಿದರು.
ಈಗಾಗಲೇ ನಿರ್ಮಾಣಗೊಂಡಿರುವ ವೆಂಟೆಡ್ ಡ್ಯಾಮ್ ಕಳಪೆಯಾಗಿದ್ದು, ದುರಸ್ತಿಗೆ 1 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು. ಜೊತೆಗೆ 16-17ನೆ ಸಾಲಿನಲ್ಲಿ ನೂತನ ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇದೇ ವೇಳೆ ‘ಸುಂದರ ಕಿನ್ನಿಗೋಳಿ’ ಯೋಜನೆಯ ರೂವಾರಿ ಬೊಗ್ಗು ಕಿನ್ನಿಗೋಳಿ, ಕಿನ್ನಿಗೋಳಿ ಮಾರ್ಕೆಟ್ ಬಳಿಯ ವಾಣಿಜ್ಯ ಸಂಕೀರ್ಣ ಕಟ್ಟಡದ ಗುತ್ತಿಗೆದಾರ ಗಿರೀಶ್, ಮತ್ತು ಪಂಚಾಯತ್ ಅಭಿವೃದ್ಧಿ ಅಕಾರಿ ಅರುಣ್ ಪ್ರದೀಪ್ ಡಿಸೋಜರನ್ನು ಸಚಿವರು ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಗ್ರಾಪಂ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರ ವಹಿಸಿದ್ದರು. ದಾಮಸ್‌ಕಟ್ಟೆ ಚರ್ಚ್‌ನ ಧರ್ಮಗುರು ರೆ.ಾ. ವಿಕ್ಟರ್ ಡಿಮೆಲ್ಲೋ, ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಕಿನ್ನಿಗೋಳಿ ಮಸೀದಿಯ ಖತೀಬ್ ಅಬ್ದುಲ್ಲತ್ೀ ಸಖಾಫಿ, ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸದಸ್ಯ ವಿಮೋದ್ ಬೊಳ್ಳೂರು, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತಾಪಂ ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ತಾಪಂ ಕಾರ್ಯನಿರ್ವಾಹಕ ಅಕಾರಿ ಎಂ.ಗೋಪಾಲಕೃಷ್ಣ ಭಟ್, ಸಹಾಯಕ ಅಭಿಯಂತರ ಸೃಜನ್ ಚಂದ್ರ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಕಿರಿಯ ಅಭಿಯಂತರ ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News