×
Ad

ರಮಝಾನ್ ಸರಕಾರಿ ಕೆಲಸದ ಅವಧಿಯಲ್ಲಿ ರಿಯಾಯಿತಿ

Update: 2016-06-01 23:46 IST

ಮಂಗಳೂರು, ಜೂ.1: ರಮಝಾನ್ ಉಪವಾಸ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ನೌಕರ ವರ್ಗಕ್ಕೆ ಅರ್ಧ ಗಂಟೆ ಮುಂ ಚಿತವಾಗಿ ಕಚೇರಿಯಿಂದ ಹೊರಡಲು ಅವಕಾಶ ಮಾಡುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ನಿರ್ದೇಶನ ಹೊರಡಿಸಿದ್ದಾರೆ.
 ಸರಕಾರಿ ಸುತ್ತೋಲೆ ಉಲ್ಲೇಖಿಸಿ, ಆಯೋಗದ ಅಧ್ಯಕ್ಷರ ನಿರ್ದೇಶನದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಗಳು ಮತ್ತು ಸಿಇಒಗಳಿಗೆ ಪತ್ರ ಬರೆದಿರುವ ಅವರು, ರಮಝಾನ್ ಉಪವಾಸ ಆಚರಿಸುವವರಿಗೆ ಮಾತ್ರ ಅರ್ಧ ಗಂಟೆ ಬೇಗ ನಿರ್ಗಮಿಸಲು ಅನುಮತಿ ನೀಡು ವಂತೆ ಅಧೀನ ಕಚೇರಿಗಳಿಗೆ ನಿರ್ದೇಶಿಸಲು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News