×
Ad

ಸಿಐಟಿಯು ಮಂಗಳೂರು ನಗರಾಧ್ಯಕ್ಷರಾಗಿ ಜಯಂತಿ ಬಿ. ಶೆಟ್ಟಿ ಪುನರಾಯ್ಕೆ,

Update: 2016-06-02 19:15 IST

ಮಂಗಳೂರು, ಜೂ. 2: ಸಿಐಟಿಯು 2ನೆ ಮಂಗಳೂರು ನಗರ ಸಮ್ಮೇಳನವು ಇತ್ತೀಚೆಗೆ ಬೋಳಾರದಲ್ಲಿ  ಜರಗಿತು.

ಮಂಗಳೂರು ನಗರದಲ್ಲಿ ಕಾರ್ಮಿಕ ಚಳವಳಿಯನ್ನು ಬಲಿಷ್ಠವಾಗಿ ಕಟ್ಟಲು ಸಮ್ಮೇಳನವು ಪಣತೊಟ್ಟಿತು. ಮುಂದಿನ 3 ವರ್ಷಗಳ ಅವಧಿಗೆ ನೂತನ ಮಂಗಳೂರು ನಗರ ಸಮಿತಿಯನ್ನು ಸಮ್ಮೇಳನವು ಆಯ್ಕೆಗೊಳಿಸಿತು.

ಅಧ್ಯಕ್ಷರಾಗಿ ಜಯಂತಿ ಬಿ. ಶೆಟ್ಟಿ ಸರ್ವಾನುಮತದಿಂದ ಪುನರಾಯ್ಕೆಗೊಂಡರೆ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಜಪ್ಪಿನಮೊಗರು, ಖಜಾಂಚಿಯಾಗಿ ಸಂತೋಷ್ ಶಕ್ತಿನಗರ ಆಯ್ಕೆಗೊಂಡರು. ಉಪಾಧ್ಯಕ್ಷರಾಳಾಗಿ ಬಾಬು ದೇವಾಡಿಗ, ಭಾರತಿ ಬೋಳಾರ, ಅಹ್ಮದ್ ಬಾವ, ಕಾರ್ಯದರ್ಶಿಗಳಾಗಿ ರವಿಚಂದ್ರ ಕೊಂಚಾಡಿ, ಸಂತೋಷ್ ಆರ್.ಎಸ್., ಮುಹಮ್ಮದ್ ಇರ್ಫಾನ್ ಅವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಯಲಕ್ಷ್ಮೀ ಜಪ್ಪಿನಮೊಗರು, ಪುಷ್ಪಲತಾ, ಯಶೋಧಾ, ಪ್ರೇಮನಾಥ ಜಲ್ಲಿಗುಡ್ಡೆ, ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಮುಹಮ್ಮದ್ ಮುಸ್ತಫಾ, ಲಿಂಗಪ್ಪ ನಂತೂರು, ಅನ್ವರ್ ಶೇಖ್, ವಿಲ್ಲಿವಿಲ್ಸನ್ ಆಯ್ಕೆಗೊಂಡರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News