ಪಿ.ಎನ್.ಭಟ್‌ಗೆ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ
Update: 2016-06-02 19:48 IST
ಸುಳ್ಯ, ಜೂ. 2: ಸಿ.ಎನ್.ಆರ್.ರಾವ್ ಫೌಂಡೇಶನ್ ವತಿಯಿಂದ ನೀಡುವ 2015ರ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಪುರಂದರ ನಾರಾಯಣ ಭಟ್ ಆಯ್ಕೆಯಾಗಿದ್ದಾರೆ.
ವಿಜ್ಞಾನ ಬೋಧನಾಕ್ರಮದಲ್ಲಿ ಹೊಸ ಬದಲಾವಣೆ, ವಿಜ್ಞಾನಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ಈಗಿನ ಶಿಕ್ಷಣ ವ್ಯವಸ್ಥೆಗೆ ವೌಲ್ಯ ತಂದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ಜೂ.30 ರಂದು ಬೆಂಗಳೂರು ಜಕ್ಕೂರಿನ ಜವಾಹರ್‌ಲಾಲ್ ನೆಹರೂ ಸೆಂಟರ್ ಫಾರ್ ಎಡ್ವಾನ್ಸ್‌ಡ್ ರೀಸರ್ಚ್ ಸೆಂಟರ್‌ನ ಸಿ.ಎನ್.ಆರ್.ರಾವ್ ಸಭಾಭವನದಲ್ಲಿ ವಿಜ್ಞಾನಿಗಳ ಸಮ್ಮುಖದಲ್ಲಿ ಪಡೆಯಲಿದ್ದಾರೆ.
ಪಿ.ಎನ್ ಭಟ್ 2010ರಲ್ಲಿ ರಾಜೀವಗಾಂಧಿ ಸ್ಮಾರಕ ರಾಜ್ಯ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಹಾಗೂ 2015ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪಡೆದಿದ್ದರು.