ಸುಳ್ಯ: ತಂಬಾಕು ರಹಿತ ದಿನಾಚರಣೆ
ಸುಳ್ಯ, ಜೂ. 2: ವಿಶ್ವ ತಂಬಾಕು ರಹಿತ ದಿನಾಚರಣೆ ಸುಳ್ಯದ ಸ್ನೇಹ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಓರಲ್ ಮೆಡಿಸಿನ್ ಮತ್ತು ರೇಡಿಯೋಲಜಿ ವಿಭಾಗ ಹಾಗೂ ಭಾರತೀಯ ಓರಲ್ ಮೆಡಿಸಿನ್ ಮತ್ತು ರೇಡಿಯೋಲಜಿ ಆಕಾಡೆಮಿಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ದಂತ ವೈದ್ಯ ಡಾ.ಜಯಪ್ರಸಾದ್ ಆನೇಕಾರ್ ಉದ್ಘಾಟಿಸಿದರು.
ಸಮಾಜದಲ್ಲಿ ತಂಬಾಕು ವಿವಿಧ ರೂಪಗಳಲ್ಲಿ ಉಪಯೋಗಿಸಲ್ಪಡುತ್ತದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ದುರಭ್ಯಾಸವನ್ನು ಆರಂಭಿಸಿದರೆ ಮತ್ತೆ ಅದು ಚಟವಾಗಿ ಬಿಡುವುದು. ಇದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ಲಿವರ್‌ನ ತೊಂದರೆಗಳು ಬಾಧಿಸುವುದು. ಹಾಗಾಗಿ ತಂಬಾಕು ಸೇವನೆಯಿಂದ ದೂರವಿರಿ, ಇತರರಿಗೂ ತಿಳಿ ಹೇಳಿ ಎಂದು ಅವರು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು. ಯಾವುದೇ ಕೆಟ್ಟ ಅಭ್ಯಾಸವನ್ನು ಮೂಲದಲ್ಲೇ ಚಿವುಟಬೇಕು ಎಂದವರು ಹೇಳಿದರು.
ಉಪನ್ಯಾಸಕ ಡಾ.ಎ.ಸಿ.ರಾಜ್, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷೆ ಡಾ.ವಿದ್ಯಾಶ್ರೀ ಕೃಷ್ಣ ಟ್, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ತಂಬಾಕಿನ ದುಷ್ಟರಿಣಾಮ ಕುರಿತು ಪ್ರಹಸನ ಹಾಗೂ ಸ್ಲೈಡ್ ಶೋ ನಡೆಯಿತು.
ಶಿಕ್ಷಕಿಯರಾದ ದಿವ್ಯಾ ಸ್ವಾಗತಿಸಿ, ಜಯಂತಿ ಕೆ. ವಂದಿಸಿದರು. ಪವಿತ್ರಾ ನಿರೂಪಿಸಿದರು.