×
Ad

ಶಿಕ್ಷಕರ ಕೊರತೆ ನೀಗಿಸಲು ಒತ್ತಾಯ: ಜೂ. 4ರಂದು ಪ್ರತಿಭಟನೆಗೆ ನಿರ್ಧಾರ

Update: 2016-06-02 20:04 IST

ಪುತ್ತೂರು, ಜೂ. 2: ಪುತ್ತೂರು ತಾಲೂಕಿನ ನಿಡ್ಪಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿ ಜೂ.4ರಂದು ಪ್ರತಿಭಟನೆ ನಡೆಸಲು ಶಾಲಾ ಪೋಷಕರು ತೀರ್ಮಾನಿಸಿದ್ದಾರೆ.

ನಿಡ್ಪಳ್ಳಿ ಶಾಲಾ ಪೋಷಕರ ಸಭೆಯು ಎಸ್‌ಡಿಎಂಸಿ ಅಧ್ಯಕ್ಷ, ಪತ್ರಕರ್ತ ಗಂಗಾಧರ ಸಿ.ಎಚ್. ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು.

ನಿಡ್ಪಳ್ಳಿ ಶಾಲೆಯಿಂದ ಬೇರೆ ಶಾಲೆಗೆ ನಿಯೋಜನೆಗೊಂಡ ಶಿಕ್ಷಕಿ ಕಾತ್ಯಾಯನಿ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಬೇಕು ಮತ್ತು ಈ ಶಾಲೆಗೆ ನಿಯೋಜನೆಗೊಂಡ ನೂತನ ಶಿಕ್ಷಕರನ್ನು ತಕ್ಷಣ ನೇಮಕಮಾಡಬೇಕು ಎಂಬ ಎರಡು ಬೇಡಿಕೆಗಳನ್ನು ಈಡೇರಿಸದಿದ್ದರೆ ಜೂ. 4ರಂದು ಶಾಲೆಯ ಬಾಗಿಲು ತೆರೆಯಲು ಬಿಡದೆ ಪ್ರತಿಭಟನೆ ನಡೆಸುವುದೆಂದು ಪೋಷಕರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News