ಮುಂಡಗೋಡ: ಬೈಕ್ ಹಾಗೂ ಮೊಬೈಲ್ ಫೋನ್ ಕಳ್ಳತನ
Update: 2016-06-03 16:08 IST
ಮುಂಡಗೋಡ: ಹೊಲದಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಹಾಗೂ ಬೈಕ್‌ನಲ್ಲಿಟ್ಟಿದ್ದ ಮೊಬೈಲ್ ಫೋನನ್ನು ವ್ಯಕ್ತಿಯೋರ್ವ ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲಗಾಂವ ಗ್ರಾಮದ ಕಲ್ಮೇಶ ಈರಪ್ಪ ಬೆಂಡಲಗಟ್ಟಿ ಎಂಬುವವರಿಗೆ ಸೇರಿದ ಹೀರೋ ಹೊಂಡಾ ಡಿಲಕ್ಸ್ (ಕೆಎ31ಎಸ್7107) ಬೈಕ್ ಅನ್ನು ಅವರ ಹೊಲದಲ್ಲಿ ನಿಲ್ಲಿಸಿಟ್ಟಿದ್ದು, ಅದನ್ನು ಚವಡಳ್ಳಿ ಗ್ರಾಮದ ನಿವಾಸಿ ನಜೀರ ಪಂಜಾಬಿ ಎಂಬಾತ ಯಾವುದೋ ಉದ್ಧೇಶದಿಂದ ಕಳವು ಮಾಡಿಕೊಂಡು ಹೋಗಿದ್ದಾನೆ. ಜೊತೆಗೆ ಸ್ಯಾಮ್ಸಂಗ್ ಮೊಬೈಲ್ ಫೋನ್ ಕೂಡ ಕಳುವು ಮಾಡಿಕೊಂಡು ಹೋಗಿದ್ದಾನೆ.
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.