×
Ad

ಮನೆಗಳ್ಳ ತಂಗರಾಜುಗೆ ನ್ಯಾಯಾಂಗ ಬಂಧನ

Update: 2016-06-03 17:38 IST

ಪುತ್ತೂರು, ಜೂ. 3: ನಗರದಲ್ಲಿ 7 ಮನೆಗಳಿಗೆ ನುಗ್ಗಿ ನಗ-ನಗದು ಕಳವು ಮಾಡಿದ ಪ್ರಕರಣದ ಆರೋಪಿ ಕುಖ್ಯಾತ ಮನೆಕಳ್ಳ ತಂಗರಾಜುವಿನ ಪೊಲೀಸ್ ಕಸ್ಟಡಿ ಅವಧಿ ಶುಕ್ರವಾರ ಮುಗಿದಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪುತ್ತೂರು ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಪುತ್ತೂರು ನ್ಯಾಯಾಲಯ ಆದೇಶಿಸಿದೆ.

ಈತ ಕಳವುಗೈದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಂಗರಾಜುವನ್ನು ಒಟ್ಟು 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಪುತ್ತೂರು ನಗರ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News