×
Ad

ಖಾಸಗಿ ವೈದ್ಯಕೀಯ ಸಂಸ್ಥೆಗಳ ನವೀಕರಣ ಕಡ್ಡಾಯ

Update: 2016-06-03 18:53 IST

ಮಂಗಳೂರು, ಜೂ.3: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007 ಮತ್ತು ನಿಯಮ-2009ರಂತೆ ಪ್ರತೀ 5 ವರ್ಷಗಳಿಗೊಮ್ಮೆ ನೋಂದಾವಣೆಯನ್ನು ನವೀಕರಿಸಬೇಕಾಗಿದ್ದು, ಜಿಲ್ಲೆಯ ಹೆಚ್ಚಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಯನ್ನು ನವೀಕರಿಸಿರುವುದಿಲ್ಲ.

ಆದ್ದರಿಂದ ನೋಂದಾವಣೆ ಅವಧಿ ಮುಗಿದಿರುವ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ನೋಂದಣಿಯನ್ನು ಕೂಡಲೇ ನವೀಕರಿಸಬೇಕಾಗಿದ್ದು, ಇದಕ್ಕೆ ಸಂಬಂಧಪಟ್ಟ ಅರ್ಜಿ ನಮೂನೆ

ತದನಂತರವೇ ಪ್ರಾಧಿಕಾರದಿಂದ ತಪಾಸಣೆಯನ್ನು ನಡೆಸಿ, ಸಂಸ್ಥೆಗೆ ನೋಂದಣಾ ಪತ್ರವನ್ನು ನೀಡಲಾಗುವುದು. ನವೀಕರಣ ಮಾಡದೇ ಇರುವ ಸಂಸ್ಥೆಗಳನ್ನು ಅನಧಿಕೃತ ಖಾಸಗಿ ವೈದ್ಯಕೀಯ ಸಂಸ್ಥೆಗಳೆಂದು ಪರಿಗಣಿಸಲಾಗುವುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಆಯಾ ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಯವರ ಕಚೇರಿಯ ಕೆಪಿಎಂಇ ವಿಭಾಗದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News