ಲ್ಯಾಂಡ್‌ಮಾರ್ಕ್ ಗ್ರಾಂಡ್‌ಸಿಟಿಗೆ ಜೂ. 5ರಂದು ಶಿಲಾನ್ಯಾಸ
ಮಂಗಳೂರು, ಜೂ.3: ಲ್ಯಾಂಡ್‌ಮಾರ್ಕ್ ಗ್ರೂಪ್ ಎಸ್‌ಎಸ್ ರಿಯಾಲಿಟಿ ಸಂಸ್ಥೆ ನಗರದ ಪಾಂಡೇಶ್ವರದಲ್ಲಿ ನಿರ್ಮಿಸಲಿರುವ ಮಂಗಳೂರಿನ ಪ್ರಪ್ರಥಮ ಕೇಂದ್ರೀಕೃತ ಹವಾನಿಯಂತ್ರಿತ ವಸತಿ ಸಮುಚ್ಚಯ ‘ಲ್ಯಾಂಡ್‌ಮಾರ್ಕ್ ಗ್ರಾಂಡ್ ಸಿಟಿ’ಗೆ ಜೂ.5ರಂದು ಶಿಲಾನ್ಯಾಸ ನೆರವೇರಲಿದೆ.
ಬೆಳಗ್ಗೆ 10 ಗಂಟೆಗೆ ಪಾಂಡೇಶ್ವರ ಶ್ರೀನಿವಾಸ ಕಾಲೇಜಿನ ಎದುರುಗಡೆ ನೆರವೇರಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಸಂಸ್ಥೆಯ ಪ್ರವರ್ತಕ ಜಿ. ಶಬೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ಲ್ಯಾಂಡ್‌ಮಾರ್ಕ್ ಗ್ರ್ಯಾಂಡ್ ಸಿಟಿ’ ವಸತಿ ಸಮುಚ್ಚಯವು ಕೇಂದ್ರೀಕೃತ ಹವಾನಿಯಂತ್ರಿತ ಮಾತ್ರವಲ್ಲದೆ ಡಿಜಿಟಲ್ ಗೇಮಿಂಗ್ ಝೋನ್, ರೂಫ್‌ಟಾಪ್ ಸ್ವಿಮ್ಮಿಂಗ್ ಫೂಲ್ ಜೊತೆಗೆ ಸ್ಟೀಮ್ ಬಾತ್‌ನ್ನು ಹೊಂದಿರಲಿದೆ. ಜಿಯೋಲಾಜಿಕಲ್ ಕಚೇರಿ ಹಾಗೂ ಶ್ರೀನಿವಾಸ ಕಾಲೇಜಿನ ಸಮೀಪ, ದಿನನಿತ್ಯದ ಅಗತ್ಯ ವಸ್ತುಗಳು ಕನಿಷ್ಠ ಅಂತರದಲ್ಲೇ ದೊರಕುವ ಪ್ರದೇಶದಲ್ಲಿ ಸಕಲ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡು ‘ಲ್ಯಾಂಡ್‌ಮಾರ್ಕ್ ಗ್ರ್ಯಾಂಡ್ ಸಿಟಿ’ ನಿರ್ಮಾಣಗೊಳ್ಳಲಿದೆ. ಸಂತೋಷದ ಕ್ಷಣಗಳನ್ನು ಕಳೆಯಲು ಅರೇಬಿಯನ್ ಸಮುದ್ರತೀರ ಹಾಗೂ ಶಾಪಿಂಗ್ ಸೆಂಟರ್‌ಗಳು ಈ ವಸತಿ ಸಮುಚ್ಚಯದ ಕೆಲವೇ ಮೀಟರ್‌ಗಳ ಅಂತರದಲ್ಲಿವೆ.
ಸುಮಾರು 67 ಶೇ.ದಷ್ಟು ತೆರೆದ ನೈಸರ್ಗಿಕ ಹಸಿರು ವಾತಾವರಣದಲ್ಲಿ, 52 ಸೆಂಟ್ಸ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ವಸತಿ ಸಮುಚ್ಚಯದಲ್ಲಿ ನೆಲಮಾಳಿಗೆ ಹಾಗೂ ನೆಲಮಹಡಿ ಪಾರ್ಕಿಂಗ್‌ಗೆ ಮೀಸಲಾಗಿರುತ್ತದೆ. 14 ಮಹಡಿಗಳನ್ನು ಒಳಗೊಂಡಿರುವ ನೂತನ ವಸತಿ ಸಮುಚ್ಚಯ 3 ಬಿಚ್‌ಎಚ್‌ಕೆಯ 41 ಮತ್ತು 28 ಘಟಕಗಳನ್ನು ಹೊಂದಿರಲಿವೆ. ಪ್ರತೀ ಮಹಡಿಯಲ್ಲಿ 5 ಘಟಕಗಳಲಿದ್ದು, ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ.
ನಗರದ ಬೋಳಾರದಲ್ಲಿ ‘ಗ್ರೀನ್ ಕೌಂಟಿ’, ಫಳ್ನೀರ್‌ನಲ್ಲಿ ‘ಫಳ್ನೀರ್ ಹೆಲ್ತ್ ಸೆಂಟರ್’, ತೊಕೊಟ್ಟಿನ ‘ಲ್ಯಾಂಡ್‌ಮಾರ್ಕ್ ಒಕ್ಸಿಜನ್’ ಒಳಗೊಂಡಿದ್ದು, ಅವುಗಳ ಸಾಲಿಗೆ ಲ್ಯಾಂಡ್‌ಮಾರ್ಕ್ ಗ್ರ್ಯಾಂಡ್‌ಸಿಟಿ ಯೋಜನೆ ಸೇರುವ ಮೂಲಕ ಲ್ಯಾಂಡ್‌ಮಾರ್ಕ್ ಗ್ರೂಪ್ ಎಸ್‌ಎಸ್ ರಿಯಾಲಿಟಿ ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೇರಿದೆ.
ನವೀನ ವಿಚಾರದಿಂದ, ಉತ್ತಮ ಗುಣಮಟ್ಟದ ಸಂಶೋಧನಾತ್ಮಕ ಕಾರ್ಯಯೋಜನೆಯಿಂದ, ಎಲ್ಲಾ ರೀತಿಯಲ್ಲಿ ಪರಿಣಿತರ ತಂಡವನ್ನು ಹೊಂದಿರುವ ಲ್ಯಾಂಡ್‌ಮಾರ್ಕ್ ಗ್ರೂಪ್ ಮತ್ತು ಎಸ್‌ಎಸ್ ರಿಯಾಲಿಟಿ ಪ್ರಗತಿಪಥದತ್ತ ಸಾಗುತ್ತಿದೆ.
ಈವರೆಗಿನ ಎಲ್ಲ ಕಾರ್ಯಯೋಜನೆಗಳು ನಿರ್ಧಾರಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ, ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಲ್ಯಾಂಡ್‌ಮಾರ್ಕ್ ಗ್ರೂಪ್, ಪ್ರಸಕ್ತ ಯೋಜನೆಯನ್ನು ಕೇವಲ 2 ವರ್ಷಗಳಲ್ಲೇ ಪೂರ್ಣಗೊಳಿಸಲಿದೆ ಎಂದು ಸಂಸ್ಥೆಯ ಪ್ರವರ್ತಕ ಜಿ. ಶಬೀರ್ ತಿಳಿಸಿದ್ದಾರೆ. ಲ್ಯಾಂಡ್‌ಮಾರ್ಕ್ ಬಗ್ಗೆ: ಜಿ. ಶಬೀರ್ ಮುಂದಾಳತ್ವದ ‘ಲ್ಯಾಂಡ್‌ಮಾರ್ಕ್ ಗ್ರೂಪ್’ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸುಮಾರು 20 ವರ್ಷಗಳ ಯಶಸ್ವಿ ಅನುಭವ ಹೊಂದಿರುವ ಸಂಸ್ಥೆಯಾಗಿದೆ. ಉತ್ತಮ ಗುಣಮಟ್ಟ, ಉದ್ದೇಶಿತ ಕಾಲಮಿತಿಯೊಳಗೆ ಯೋಜನೆ ಸಂಪೂರ್ಣಗೊಳಿಸುವ ಸಾಮರ್ಥ್ಯ, ಅಭಿವೃದ್ಧಿ ಹೊಂದಿದ ತಾಂತ್ರಿಕತೆ, ಪಾರದರ್ಶಕತೆ, ಆಧುನಿಕ ವಿನ್ಯಾಸ ಮತ್ತು ಸೌಲ್ಯಗಳು ಈ ಸಂಸ್ಥೆಯ ವಿಶೇಷತೆಯಾಗಿದೆ.
ಹೆಚ್ಚಿನ ವಿವರಗಳಿಗಾಗಿ, ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್, 1ನೆ ಮಹಡಿ, ಮಾಝ್ ಚೇಂಬರ್ಸ್, ಫಳ್ನೀರ್, ಮಂಗಳೂರು. ಇಮೇಲ್: info@landmarkinfratech.comwww.landmarkinfratech.com , ವೆಬ್‌ಸೈಟ್: ಸಂಪರ್ಕಿಸಬಹುದು.
ವಿಶೇಷತೆಗಳು
- ಮಂಗಳೂರಿನ ಪ್ರಥಮವಾಗಿ ಕೇಂದ್ರೀಕೃತ ಹವಾನಿಯಂತ್ರಿತ ವಸತಿ ಸಮುಚ್ಚಯ
- ಡಿಜಿಟಲ್ ಗೇಮಿಂಗ್ ಕ್ಲಬ್
- ಚಟುವಟಿಕಾ ಕೇಂದ್ರ ಮತ್ತು ಸ್ಮಿಮ್ಮಿಂಗ್ ಪೂಲ್ ಹೊಂದಿರುವ ಟೆರೆಸ್
- ಸುಸಜ್ಜಿತ ಮಲ್ಟಿ ಪರ್ಪಸ್ ಜಿಮ್ನೆಸಿಯಂ
- ಸುಸಜ್ಜಿತ ಸೆಕ್ಯುರಿಟಿ ಸಿಸ್ಟಂ
ಸೌಲಭ್ಯಗಳು
- ಮಲ್ಟಿ-ಪರ್ಪಸ್ ಕ್ಲಬ್ ಹೌಸ್
- ಸಕಲ ಸೌಲಭ್ಯಗಳ ಎಸಿ ಹೆಲ್ತ್ ಕ್ಲಬ್
- ಟೇಬಲ್ ಟೆನಿಸ್, ಸ್ನೂಕರ್ ಪೂಲ್ ಹೊಂದಿರುವ ಒಳಾಂಗಣ ಆಟಗಳ ವ್ಯವಸ್ಥೆ
- ಮಕ್ಕಳ ಆಟದ ಪ್ರದೇಶ
- ವಿಶಾಲ ವಿಸಿಟರ್ಸ್ ಲಾಂಜ್
- ಮಾನಿಟರಿಂಗ್ ಮತ್ತು ರೆಕಾರ್ಡಿಂಗ್ ವ್ಯವಸ್ಥೆ
- ಸೋಲಾರ್ ವಾಟರ್ ಹೀಟರ್ ಕನೆಕ್ಷನ್
- ರೆಟಿಕ್ಯುಲೇಟಡ್ ಗ್ಯಾಸ್ ಕನೆಕ್ಷನ್
- 24*7 ಜನರೇಟರ್ ಬ್ಯಾಕ್‌ಅಪ್
- 10 ಮತ್ತು 13 ಜನರ ಸಾಮರ್ಥ್ಯವುಳ್ಳ 2 ಎಲವೇಟರ್‌ಗಳು
- ಸ್ಟೀಮ್ ಬಾತ್