ಜೂ.5ರಂದು ಅತ್ಯಾಧುನಿಕ ಸರ್ವಿಸ್ ಸೆಂಟರ್ ಪ್ರೊವೀಲ್ಸ್ ಕಾರ್‌ಕೇರ್ ಉದ್ಘಾಟನೆ
ಮಂಗಳೂರು, ಜೂ.3: ವಾಹನಗಳ ಎಲ್ಲಾ ಸರ್ವಿಸ್‌ಗಳು ಒಂದೇ ಸೂರಿನಡಿಯಲ್ಲಿ ಲಭಿಸುವ ಸರ್ವಿಸ್ ಸೆಂಟರ್ ‘ಪ್ರೊವೀಲ್ಸ್ ಕಾರ್‌ಕೇರ್’ ನಗರದ ಫಳ್ನೀರ್ ಮುಖ್ಯರಸ್ತೆಯ ಇಂದಿರಾ ಹಾಸ್ಪಿಟಲ್ ಸಮೀಪ ಜೂ.5ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಈ ಸರ್ವಿಸ್ ಸೆಂಟರ್ ಕಚೇರಿ ಸಹಿತ 8,000 ಚದರ ಅಡಿಗಳ ವಿಸ್ತಾರ ಹೊಂದಿದ್ದು, ಇಲ್ಲಿ ಎಲ್ಲಾ ರೀತಿಯ, ಎಲ್ಲಾ ವಿಧದ ವಾಹನಗಳ ಪೂರ್ಣ ಪ್ರಮಾಣದ ಸರ್ವಿಸ್‌ಗಳು ಲಭ್ಯವಿವೆ. ಪರಿಣತ ಸಿಬ್ಬಂದಿಯನ್ನು ಹೊಂದಿದ್ದು, ಗ್ರಾಹಕರ ವಾಹನಗಳನ್ನು ವೃತ್ತಿಪರವಾಗಿ ನಿರ್ವಹಿಸಲಾಗುವುದು. ಕ್ಲಪ್ತ ಸಮಯಕ್ಕೆ ವಾಹನಗಳ ಸೇವೆಗಳನ್ನು ಮಾಡಿಕೊಡಲಾಗುವುದು.
ವಿದೇಶಿ ಹಾಗೂ ದೇಶಿ ಕಂಪೆನಿಗಳಾದ ಬ್ರಿಡ್ಜ್‌ಸ್ಟೋನ್, ಫಾಲ್ಕನ್, ಫಿರೆಲಿ, ಗುಡ್‌ಇಯರ್, ಜೆಕೆ ಟೈರ್ಸ್, ಅಪೋಲೊ, ಸಿಯೆಟ್ ಮತ್ತು ಕಾಂಟಿನೆಂಟಲ್ ಕಂಪೆನಿಗಳ ಟೈರ್‌ಗಳು ಅತ್ಯುತ್ತಮ ಬೆಲೆಗೆ ಇಲ್ಲಿ ಲಭ್ಯವಿವೆ. ಎಲ್ಲಾ ಶ್ರೇಣಿಗಳ ಟೈರ್ ಹಾಗೂ ಮಾರಾಟ, ವ್ಹೀಲ್ ಅಲೈನ್‌ಮೆಂಟ್, ವ್ಹೀಲ್ ಬ್ಯಾಲೆನ್ಸಿಂಗ್, ಅಟೊಮ್ಯಾಟಿಕ್ ಟೈರ್ ಚೇಂಜರ್, ನೈಟ್ರೋಜನ್, 3ಎವ್ ಕಾರ್ ವಾಶ್, 3ಎಮ್ ಪೊಲಿಶಿಂಗ್ ಮತ್ತು ಡಿಟೈಲಿಂಗ್, ಏರ್ ಕಂಡೀಶನರ್ ಟ್ರೀಟ್‌ಮೆಂಟ್, ಪೇಂಯ್ಟಿಂಗ್ ಮತ್ತು ಡೆಂಟಿಂಗ್, ಕಾರ್ ಇನ್ಶೂರೆನ್ಸ್, ಎಮಿಶನ್, ಕಾರ್ ಬಿಡಿಭಾಗಗಳು, ಬ್ರೇಕ್‌ಡೌನ್ ಸರ್ವಿಸಸ್ ಹಾಗೂ ಲಾಯಲ್ಟಿ ಪ್ರೋಮುಂತಾದ ಸೇವೆಗಳು ಕ್ಲಪ್ತ ಸಮಯಕ್ಕೆ ಮತ್ತು ಸಮಂಜಸ ಬೆಲೆಯಲ್ಲಿ ದೊರಕುವುವು. ಪ್ರತಿಯೊಂದು ಕಾರ್‌ಕೇರ್ ಸರ್ವಿಸ್ ಒಂದೇ ಸೂರಿನಡಿ ಸಿಗುವುದು ಇಲ್ಲಿನ ವಿಶೇಷತೆಯಾಗಿದೆ.
ಮುಂದಿನ ಮೂರು ತಿಂಗಳೊಳಗೆ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರ ಅಗತ್ಯಕ್ಕೆ ತಕ್ಷಣವೇ ಸ್ಪಂದಿಸುವಂತೆ, ಆ್ಯಪನ್ನು ಬಿಡುಗಡೆ ಮಾಡಲಾಗುವುದು. ಆನ್‌ಲೈನ್ ಬುಕಿಂಗ್/ಹಣ ಸಂದಾವಣೆ ಮುಂತಾದ ಕಾರ್ಯಗಳನ್ನು ಸುಲಭವಾಗಿ ಈ ಮೂಲಕ ನಿರ್ವಹಿಸಬಹುದಾಗಿದೆ.
ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಣಚೂರ್ ಗ್ರೂಪ್ ಆಫ್ ಕಂಪೆನೀಸ್‌ನ ಅಧ್ಯಕ್ಷ ಕಣಚೂರ್ ಮೋನು, ಟ್ರಾಫಿಕ್ ಎಸಿಪಿ ಉದಯ ಎಮ್. ನಾಯಕ್, ಹಾಗೂ ಮನಪಾ ಸದಸ್ಯ ಅಬ್ದುಲ್ ರವೂಫ್ ಹಾಜರಿರುವರು ಎಂದು ಸಂಸ್ಥೆಯ ಪ್ರವರ್ತಕರಾದ ರಶೀದ್ ಮತ್ತು ಹಿಶಾಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಪ್ರೋಕಾರ್‌ಕೇರ್, ಇಂದಿರಾ ಹಾಸ್ಪಿಟಲ್ ಬಳಿ, ಫಳ್ನೀರ್ ಮುಖ್ಯ ರಸ್ತೆ, ಮಂಗಳೂರು ಇಲ್ಲಿ ಸಂಪರ್ಕಿಸಬಹುದಾಗಿದೆ.