ಸ್ವೀಡನ್ ಅತ್ಯುತ್ತಮ ದೇಶ, ಭಾರತದ ಸ್ಥಾನ 70
Update: 2016-06-03 22:38 IST
ಲಂಡನ್, ಜೂ. 3: ತನ್ನ ಪ್ರಜೆಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುವ ಹಾಗೂ ಮಾನವತೆಯ ಸಮಾನ ಒಳಿತಿಗಾಗಿ ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಸ್ವೀಡನ್ ಅತ್ಯುತ್ತಮ ದೇಶವಾಗಿ ಹೊರಹೊಮ್ಮಿದೆ.ಅದೇ ವೇಳೆ, 163 ದೇಶಗಳ ಪಟ್ಟಿಯಲ್ಲಿ ಭಾರತ 70ನೆ ಸ್ಥಾನವನ್ನು ಪಡೆದಿದೆ.
ದೇಶಗಳು ಜಾಗತಿಕ ಹಿತಾಸಕ್ತಿಗಾಗಿ ಯಾವ ದೇಣಿಗೆಗಳನ್ನು ನೀಡುತ್ತಿವೆ ಎನ್ನುವ ಆಧಾರದಲ್ಲಿ ‘ಆದರ್ಶ ದೇಶ 2015’ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.
ಅಗ್ರ 10ರ ಪಟ್ಟಿಯಲ್ಲಿ ಬರುವ ದೇಶಗಳು: ಸ್ವೀಡನ್, ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್, ಬ್ರಿಟನ್, ಜರ್ಮನಿ, ಫಿನ್‌ಲ್ಯಾಂಡ್, ಕೆನಡ, ಫ್ರಾನ್ಸ್, ಆಸ್ಟ್ರಿಯ ಮತ್ತು ನ್ಯೂಝಿಲ್ಯಾಂಡ್.
ಲಿಬಿಯ ಕೊನೆಯ ಸ್ಥಾನದಲ್ಲಿದೆ.