ಪೊಲೀಸ್ ವಿರುದ್ಧ ಆರೋಪವಿಲ್ಲ
Update: 2016-06-03 23:39 IST
ಸೈಂಟ್ ಲೂಯಿಸ್, ಜೂ. 3: 2015 ಆಗಸ್ಟ್‌ನಲ್ಲಿ ಕರಿಯ ಹದಿಹರೆಯದ ವ್ಯಕ್ತಿಯೋರ್ವರನ್ನು ಗುಂಡಿಟ್ಟು ಕೊಂದ ಸೈಂಟ್ ಲೂಯಿಸ್‌ನ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗುವುದಿಲ್ಲ ಎಂದು ಮಿಝೂರಿ ಪ್ರಾಸಿಕ್ಯೂಟರ್ ಗುರುವಾರ ಹೇಳಿದ್ದಾರೆ.
ಮಫ್ತಿಯಲ್ಲಿದ್ದ ಅಧಿಕಾರಿಗಳು ಸ್ವರಕ್ಷಣೆಗಾಗಿ 18 ವರ್ಷದ ಮನ್ಸೂರ್ ಬಾಲ್-ಬೆ ಮೇಲೆ ಗುಂಡು ಹಾರಿಸಿದ್ದಲ್ಲ ಎನ್ನುವುದನ್ನು ತೋರಿಸುವ ಸಾಕಷ್ಟು ಪುರಾವೆ ಇಲ್ಲ ಎಂದು ಸರ್ಕೀಟ್ ಅಟಾರ್ನಿ ಜೆನಿಫರ್ ಜಾಯ್ಸಿ ತಿಳಿಸಿದರು.
ಅಧಿಕಾರಿಗಳು ಮನೆಯೊಂದರಲ್ಲಿ ಸರ್ಚ್ ವಾರಂಟನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದಾಗ ಬಾಲ್-ಬೇ ಹತರಾಗಿದ್ದರು.