×
Ad

ಇಂದು ರಮಝಾನ್ ಸ್ವಾಗತ ಕಾರ್ಯಕ್ರಮ

Update: 2016-06-03 23:44 IST

ಮಂಗಳೂರು, ಜೂ. 3: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಅಡ್ಯಾರ್ ಕಣ್ಣೂರು ಕ್ಲಸ್ಟರ್ ವತಿಯಿಂದ ‘ರಮಝಾನ್ ಸ್ವಾಗತ ಮತ್ತು ಸಾಧಕರಿಗೆ ಸನ್ಮಾನ’ ಕಾರ್ಯಕ್ರಮ ಜೂ.4ರಂದು ಮಗ್ರಿಬ್ ನಮಾಝಿನ ಬಳಿಕ ಬೋರುಗುಡ್ಡೆ ಬಿಎಚ್‌ಐ ಮದ್ರಸ ಹಾಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋರುಗುಡ್ಡೆ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ವಹಿಸಲಿದ್ದಾರೆ. ಕುಂಡಾಲ ಮಸೀದಿಯ ಇಮಾಮ್ ಅಬ್ದುರ್ರಶೀದ್ ನೀಫಿ ‘ರಮಝಾನಿನ ಮಹತ್ವ’ಎಂಬ ವಿಷಯದಲ್ಲಿ ಹಾಗೂ ಕ್ಯಾಂಪಸ್ ವಿಂಗ್‌ನ ಜಿಲ್ಲಾಧ್ಯಕ್ಷ ಇಬ್ರಾಹೀಂ ಬಾತಿಶ್ ಕಲ್ಲಡ್ಕ ‘ಕ್ಯಾಂಪಸ್‌ನಲ್ಲಿ ಮುಸ್ಲಿಮರ ಕರ್ತವ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News