×
Ad

ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಸೆರೆ

Update: 2016-06-03 23:48 IST

ಕಾಸರಗೋಡು, ಜೂ.3: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಳಿಪರಂಬದ ಅಬ್ದುಸ್ಸಲಾಂ (56)ಎಂಬಾತನನ್ನು ನಾಲ್ಕು ವರ್ಷಗಳ ಬಳಿಕ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರ ಪೊಡಿಪಳ್ಳದ ಹದಿಮೂರು ವರ್ಷ ಪ್ರಾಯದ ಬಾಲಕಿಗೆ ಆಕೆಯ ತಾಯಿಯ ಒತ್ತಾಸೆಯಿಂದ 2012ರ ಆಗಸ್ಟ್‌ನಲ್ಲಿ ಕಿರುಕುಳ ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕಿಯ ತಾಯಿ, ಸಂಬಂಧಿಕರಾದ ಅಬ್ದುಲ್ ಕರೀಂ, ನಾಸರ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು. ಆದರೆ ಅಬ್ದುಸ್ಸಲಾಂ ತಲೆಮರೆಸಿಕೊಂಡಿದ್ದ. ಸೈಬರ್ ಸೆಲ್ ನೆರವಿನಿಂದ ಈತನನ್ನು ಬಂಧಿಸಲಾಯಿತು. ಇದರಿಂದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ.
 ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಅಬ್ದುಸ್ಸಲಾಂ ಏಜೆಂಟ್ ಮೂಲಕ ಬಾಲಕಿಯ ಪರಿಚಯ ಮಾಡಿಸಿಕೊಂಡು ತಳಿಪರಂಬದ ಮನೆಗೆ ಕೊಂಡೊಯ್ದು ಕಿರುಕುಳ ನೀಡಿದ್ದ. ಚೈಲ್ಡ್‌ಲೈನ್ ಅಧಿಕಾರಿಗಳ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News