×
Ad

ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಸುಭಾಷ್ ಪಡೀಲ್‌ನ ಕೊಲೆ ಯತ್ನ

Update: 2016-06-04 13:04 IST

 ಮಂಗಳೂರು,ಜೂ.4:ಪಡೀಲ್‌ ಹೋಂ ಸ್ಟೇ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿ ಸುಭಾಷ್‌ ಪಡೀಲ್‌ ಎಂಬಾತನನ್ನು  ಮಂಗಳೂರು ಸೆಷನ್ಸ್ ಕೋರ್ಟ್‌  ಆವರಣದಲ್ಲೇ  ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.
ರಾಜ ಅಲಿಯಾಸ್‌  ಜಪಾನ್‌ ಮಂಗ ಎಂಬಾತನು ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಡೀಲ್‌ ಹೋಂ ಸ್ಟೇ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಕೋರ್ಟ್‌‌ಗೆ ಬಂದಿದ್ದ  ಸುಭಾಷ್‌ ನ ಕೊಲೆ ಯತ್ನ ನಡೆದಿದೆ.
ಸುಭಾಷ್ ಪಡೀಲ್ ಮತ್ತು ರಾಜನ ಸಹಚರರ ನಡುವೆ ಕೋರ್ಟ್‌ ಆವರಣದಲ್ಲೇ ಹೊಡೆದಾಟ ಸಂಭವಿಸಿದೆ. ಆರೋಪಿ ರಾಜನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News