ಬಹ್ರೈನ್: ಕೇರಳದ ಯುವತಿಯನ್ನು ಸೆಕ್ಸ್ ಜಾಲಕ್ಕೆ ಆಹುತಿ ನೀಡಲು ಯತ್ನಿಸಿದಾತನಿಗೆ 10ವರ್ಷ ಜೈಲು
ಮನಾಮ, ಜೂನ್ 4: ಕೇರಳದಿಂದ ಸಲೂನ್‌ನಲ್ಲಿ ಕೆಲಸಕ್ಕೆಂದು ಕರೆತಂದ ಯುವತಿಯನ್ನು ಶಾರೀರಿಕ ಹಾಗು ಮಾನಸಿಕವಾಗಿ ಕಿರುಕುಳ ನೀಡಿ ಸೆಕ್ಸ್ ಜಾಲಕ್ಕೆ ಸೇರಿಸಲು ಶ್ರಮಿಸಿದ ಭಾರತೀಯನಿಗೆ ಹೈಕ್ರಿಮಿನಲ್ ಕೋರ್ಟ್ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಿದೆ. ಶಿಕ್ಷೆ ಪೂರ್ಣಗೊಳಿಸಿದ ನಂತರ ಈತನನ್ನು ಗಡಿ ಪಾರು ಮಾಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಮಾನವ ಸಾಗಾಟ, ವೇಶ್ಯಾವೃತ್ತಿಗೆ ಪ್ರಚೋದನೆ ಮುಂತಾದ ಆರೋಪಗಳಲ್ಲಿ ಈತ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.
ತನ್ನನ್ನು ಒಬ್ಬ ಕೆಲಸಕ್ಕೆಂದು ಬಹ್ರೈನ್‌ಗೆ ಕರೆತಂದಿದ್ದ ಎಂದು ಬಲಿಪಶು ಯುವತಿ ಪ್ರಾಸಿಕ್ಯೂಟರ್‌ಗೆ ಹೇಳಿದ್ದರು. ಊರಲ್ಲಿ 50,000 ರೂಪಾಯಿ ನೀಡಿ ವೀಸಾ ಪಡೆದಿದ್ದೆ. ತನ್ನನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಬಂದ ಆರೋಪಿ ನೇರವಾಗಿ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿದ್ದ ಎಂದು ಯುವತಿ ಹೇಳಿದ್ದರು. ಇಲ್ಲಿ ಮೂರು ದಿವಸ ವಾಸಿಸಿದ ನಂತರ ಅಪಾರ್ಟ್‌ಮೆಂಟ್‌ನ್ನು ಬದಲಾಯಿಸಿದ್ದಾನೆ, ಅಲ್ಲಿ ಸೆಕ್ಸ್ ಜಾಲದ ಸದಸ್ಯಳಾಗಬೇಕೆಂದು ತನಗೆ ಹೊಡೆದಿದ್ದಾನೆ. ಮೊಬೈಲ್ ಫೋನ್, ಪಾಸ್‌ಪೋರ್ಟ್ ಈ ತಂಡದ ಕೈಸೇರಿದ್ದರಿಂದಹೊರಜಗತ್ತಿನೊಂದಿಗೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಇವರಲ್ಲಿ ಒಬ್ಬ ಅಪಾರ್ಟ್‌ಮೆಂಟ್‌ನಲ್ಲಿ ಮರೆತು ಹೋದ ಬೀಗದ ಕೈ ಯಿಂದ ಬಾಗಿಲು ತೆರೆದು ಹೊರಗೆ ಬಂದದ್ದರಿಂದ ಪಾರಾಗಿದ್ದರು.
ದಾರಿಯಲ್ಲಿ ಅಳುತ್ತಾ ಹೋಗುತ್ತಿದ್ದ ಯುವತಿಯನ್ನುಒಬ್ಬ ಭಾರತೀಯನೇ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಈತನ ಕಾರನ್ನು ಬೆಂಬತ್ತಿದ್ದ ತಂಡ ಕೊಲೆಗೈಯ್ಯುವ ಬೆದರಿಕೆ ಹಾಕಿದರೂ ಅದನ್ನು ಕಡೆಗಣಿಸಿ ಪೊಲೀಸ್ ಸ್ಟೇಶನ್‌ಗೆ ಯುವತಿಯನ್ನು ಆತ ಯಶಸ್ವಿಯಾಗಿ ತಲುಪಿಸಿದ್ದರು. ಕೋರ್ಟ್ ತೀರ್ಪು ವಿರುದ್ಧ ಕ್ರಿಮಿನಲ್ ಅಪೀಲ್ಸ್ ಕೋರ್ಟ್‌ನ್ನು ಸಂಪರ್ಕಿಸುತ್ತೇವೆ ಎಂದು ಆರೋಪಿಗಳ ವಕೀಲರು ಹೇಳಿದ್ದಾರೆ.