×
Ad

ಮುಹಮ್ಮದ್ ಅಲಿಗೆ ಸಾಟಿ ಯಾರು ?

Update: 2016-06-04 14:50 IST

ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಗೆ ಸರಿಸಾಟಿ ಯಾರೂ ಇಲ್ಲ, ಅವರಿಗೆ ಅವರೇ ಸಾಟಿ. ಮುಹಮ್ಮದ್ ಅಲಿಯವರ ಯುಗಾಂತ್ಯವಾಗಿದೆ. ಇಂದು ಅವರು ನಮ್ಮೊಂದಿಗಿಲ್ಲ.

ಅವರ ಬಗ್ಗೆ ಕೆಲವು ಮುಖ್ಯ ಮಾಹಿತಿಗಳು ಇಲ್ಲಿವೆ ಓದಿ.

1.ಅವರ ಮೂಲ ನಾಮ ಕಾಸ್ಸಿಯಸ್ ಮಾರ್ಸೆಲ್ಲಸ್ ಕ್ಲೇ ಜೂನಿಯರ್. ನಂತರ ಅವರು ತಮ್ಮ ಹೆಸರನ್ನು ಮುಹಮ್ಮದ್ ಅಲಿ ಎಂದು ಬದಲಿಸಿಕೊಂಡರು.  ಲೂಯಿಸ್ವಿಲ್ಲೆ ಕೆಂಟಕಿಯಲ್ಲಿ ಅವರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರು ಯಾವತ್ತೂ ಶಾಲಾ ಬಸ್ಸಿನಲ್ಲಿ ಹೋಗುತ್ತಿರಲಿಲ್ಲ, ಬದಲಾಗಿ  ಪ್ರತಿ ದಿನ ಬೆಳಿಗ್ಗೆ ಶಾಲೆಗೆ ಬಸ್ಸನ್ನು ರೇಸ್ ಮಾಡಿಕೊಂಡು ಓಡುತ್ತಾ ಹೋಗುತ್ತಿದ್ದರು.

2. ಬಾಲ್ಯದಲ್ಲಿ ಅವರ ಹೊಸ ಬೈಸಿಕಲ್ ಕದ್ದು ಹೋದಾಗ  ಅವರು ಸ್ಟೇಶನ್ನಿಗೆ ಹೋಗಿ ಕಳ್ಳನಿಗೆ ಜಾಡಿಸುವುದಾಗಿ ಹೇಳಿದರು. ಬಾಕ್ಸಿಂಗ್ ಟ್ರೈನರ್ ಆಗಿದ್ದ ಪೊಲೀಸ್ ಅಧಿಕಾರಿ  ಜೋ ಮಾರ್ಟಿನ್ ಅವರಿಗೆ ಫೈಟ್ ಮಾಡುವುದು ಹೇಗೆಂದು ಮೊದಲು ಕಲಿಯಲು ಹೇಳಿದರು. ಇದು ಅವರ ಬಾಕ್ಸಿಂಗ್ ವೃತ್ತಿಯ ಆರಂಭಕ್ಕೆ ಹೇತುವಾಯಿತು.

3. ಚಾಂಪಿಯನ್ ಸೊನ್ನಿ ಲಿಸ್ಟನ್ ಅವರನ್ನು ಸೋಲಿಸಿದ ದಿನವೇ ಅವರು ತಮ್ಮ ಹೆಸರನ್ನು ಕ್ಯಾಸ್ಸಿಯಸ್ ಘಿ ಎಂದು ಬದಲಿಸಿಕೊಂಡರು. ಮುಹಮ್ಮದ್ ಅಲಿ ಎಂಬ ಹೆಸರು ಅವರಿಗೆ ಮಾರ್ಚ್ 4, 1964 ರಲ್ಲಿ ನೀಡಲಾಯಿತು.

4.1967ರ ವೀಯೆಟ್ನಾಮ್ ಯುದ್ಧದ ಸಂದರ್ಭ ಅವರನ್ನು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಆದರೆ ಅವರು ನಿರಾಕರಿಸಿದಾಗ  ನ್ಯೂಯಾರ್ಕ್ ಸ್ಟೇಟ್ ಅಥ್ಲೆಟಿಕ್ ಕಮಿಷನ್ ಅವರಿಗೆ ಮೂರು ವರ್ಷಗಳ ಕಾಲ ನಿಷೇಧ ಹೇರಿತು. ಅವರ ಪದವಿಯನ್ನೂ ಕಿತ್ತುಕೊಳ್ಳಲಾಯಿತು. ಅವರಿಗೆ ಗರಿಷ್ಠ  5 ವರ್ಷ ಸೆರೆವಾಸ ವಿಧಿಸಲಾಯಿತು ಹಾಗೂ 10,000 $ ದಂಡ ಕೂಡ ಹಾಕಲಾಯಿತು.

5.ಬಾಕ್ಸಿಂಗ್ ಆಡದೇ ಇದ್ದ ಸಂದರ್ಭ ಅವರು  ಬ್ರಾಡ್ ವೇ ಸಂಗೀತಮಯ ಚಿತ್ರ `ಬಕ್ ವೈಟ್' ನಲ್ಲಿ ಕಾಣಿಸಿಕೊಂಡರು.  ಅವರು `ಐ ಆಮ್ ದಿ ಗ್ರೇಟೆಸ್ಟ್' ಎಂಬ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ.

6.ಸೊನ್ನಿ ಲಿಸ್ಟನ್ ಅವರನ್ನು ಸೋಲಿಸಿದಾಗ ಅವರು ಧರಿಸಿದ್ದ ಕೈಗವಸು (ಗ್ಲೋವ್ಸ್)  836000 ಡಾಲರ್ ದಾಖಲೆ ಮೊತ್ತಕ್ಕೆ ಮಾರಾಟವಾಯಿತು. ಆದರೆ ಅವರ ಈ ಗೆಲುವಿಗೆ ಅವರಿಗೆ ದಕ್ಕಿದ್ದು ಕೇವಲ 630000 ಡಾಲರ್.

7.ಮುಹಮ್ಮದ್ ಅವರನ್ನು ಸೋಲಿಸಿದ ಏಕೈಕ ಬಾಕ್ಸರ್  ಕೆಂಟ್ ಗ್ರೀನ್ ಆಗಿದ್ದರು.

8.ಅಮೆರಿಕಾದ ಬಾಕ್ಸಿಂಗ್ ಅಭಿಮಾನಿಗಳಿಗೆ ಸಹಾಯವಾಗಲೆಂದು ತಮ್ಮ ಖ್ಯಾತ ಪಂದ್ಯ `ರಂಬಲ್ ಇನ್ ದಿ ಜಂಬಲ್' ಪಂದ್ಯವನ್ನು ಅವರು ಅಜೇಯ ಚಾಂಪಿಯನ್ ಜಾರ್ಜ್ ಫೋರ್ಮೆನ್ ವಿರುದ್ಧ 1974ರಲ್ಲಿ ಬೆಳಿಗ್ಗೆ 4 ಗಂಟೆಗೆ ಆಡಿದ್ದರು.

9.1960 ರ ರಿಯೋ ಒಲಿಂಪಿಕ್ಸ್ ನಲ್ಲಿ ಅವರು ಚಿನ್ನದ ಪದಕ ಪಡೆದಿದ್ದರು. ಇದು ಈಗ ಓಹಿಯೋ ನದಿಯಲ್ಲಿರಬಹುದು. ವರ್ಣಬೇಧವನ್ನು ವಿರೋಧಿಸಿ ಅವರು ಪದಕವನ್ನು ನದಿಗೆಸೆದಿದ್ದರು. 1996ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಅವರು  ಇದಕ್ಕೆ ಬದಲಿ ಪದಕ ಪಡೆದಿದ್ದರು.

10.ಅವರು ಒಟ್ಟು 61 ಪಂದ್ಯಗಳನ್ನು ಆಡಿದ್ದರೆ ಅವುಗಳಲ್ಲಿ 56ರಲ್ಲಿ ವಿಜಯಿಯಾಗಿದ್ದರು. ಒಟ್ಟು 37 ಪಂದ್ಯಗಳನ್ನು ನಾಕೌಟ್ ಮುಖಾಂತರ ಅವರು ಗೆದ್ದಿದ್ದರಲ್ಲದೆ ಕೇವಲ 5 ಪಂದ್ಯಗಳಲ್ಲಿ ಸೋತಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News