ಮುಹಮ್ಮದ್ ಅಲಿಯ 10 ಮರೆಯಲಾಗದ ಮಾತುಗಳು
ವಿಶ್ವವಿಖ್ಯಾತ ಬಾಕ್ಸರ್ ಮುಹಮ್ಮದ್ ಅಲಿಯವರ ಪ್ರತಿಭೆ ಕೇವಲ ಬಾಕ್ಸಿಂಗ್ ರಿಂಗ್ ಗೆ ಸೀಮಿತವಾಗಿರಲಿಲ್ಲ. ಅವರು ಬಹಳ ಆಳವಾಗಿ ಯೋಚಿಸುತ್ತಿದ್ದರು ಹಾಗೂ ಕ್ರೀಡಾಳುಗಳಲ್ಲಿ ಅಪರೂಪವಾಗಿರುವ ತೀಕ್ಷ್ಣ ನಾಲಗೆಯನ್ನೂ ಹೊಂದಿದ್ದರು.
ಅವರ ಕೆಲವು ಸ್ಪೂರ್ತಿದಾಯಕ ಹಾಗೂ ಮರೆಯಲಾಗದ ಮಾತುಗಳು ಇಲ್ಲಿವೆ.
1. "ತಮ್ಮ ಜಗತ್ತನ್ನು ಬದಲಾಯಿಸುವಂತಹ ತಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳುವ ಬದಲು ತಮಗೆ ನೀಡಲಾದ ಜಗತ್ತಿನಲ್ಲಿ ಜೀವಿಸುವುದು ಸುಲಭವೆಂದು ತಿಳಿದುಕೊಂಡ ಕೆಲ ಸಣ್ಣ ಮನುಷ್ಯರು ಎಸೆಯುವ ಪದವೇ ಅಸಾಧ್ಯ. ಅಸಾಧ್ಯವೆಂಬುದು ವಾಸ್ತವವಲ್ಲ. ಅದೊಂದು ಅಭಿಪ್ರಾಯ. ಅಸಾಧ್ಯವೆಂಬುದು ಒಂದು ಸಾಮರ್ಥ್ಯ. ಅಸಾಧ್ಯವೆಂಬುದು ತಾತ್ಕಾಲಿಕ. ಅಸಾಧ್ಯ ಏನೂ ಅಲ್ಲ.''
2. "ಚಿಟ್ಟೆಯಂತೆ ಹಾರಾಡಿ, ಜೇನುನೊಣದಂತೆ ಕಚ್ಚಿ. ನಿಮ್ಮ ಕಣ್ಣಿಗೆ ಕಾಣದೇ ಇರುವುದನ್ನು ನಿಮಗೆ ಹೊಡೆಯಲು ಸಾಧ್ಯವಿಲ್ಲ.
3. "ನಾನೇ ಮಹಾನ್. ನಾನು ಮಹಾನ್ ಎಂದು ತಿಳಿಯುವ ಮೊದಲೇ ನಾನು ಹಾಗೆಂದು ಹೇಳಿದ್ದೇನೆ. ನಾನು ಹಾಗೆಂದು ತಿಳಿದುಕೊಂಡಿದ್ದರೆ, ನಾನು ನಿಜವಾಗಿಯೂ ಮಹಾನ್ ಎಂದು ವಿಶ್ವಕ್ಕೆ ಸಾಬೀತು ಪಡಿಸಲ್ಲೆ.''
4. "ನಾನು ಆ ದೀಪಗಳಡಿಯಲ್ಲಿ ನರ್ತಿಸುವುದಕ್ಕಿಂತ ಬಹಳಷ್ಟು ಮೊದಲು, ಸಾಕ್ಷಿಗಳಿಂದ ಬಹಳ ದೂರ, ಗೆರೆಗಳ ಹಿಂದೆ, ಜಿಮ್ ನಲ್ಲಿ, ಅಲ್ಲಿ ರಸ್ತೆಯಲ್ಲಿ ಪಂದ್ಯಗಳನ್ನು ಗೆಲ್ಲಲಾಗುತ್ತದೆ ಅಥವಾ ಸೋಲಲಾಗುತ್ತದೆ.
5. "ದಿನಗಳನ್ನು ಲೆಕ್ಕ ಮಾಡಬೇಡಿ, ಪ್ರತಿ ದಿನವೂ ಅವಿಸ್ಮರಣೀಯವನ್ನಾಗಿಸುವಂತೆ ನೋಡಿ."
6. "ಆತ್ಮಬಲ ತೋಳ್ಬಲಕ್ಕಿಂತ ಶಕ್ತಿಶಾಲಿಯಾಗಿರಬೇಕು.''
7. "ಮುಂದೆ ಇರುವ ಪರ್ವತಗಳು ನಿಮ್ಮ ಶಕ್ತಿಯನ್ನು ಕುಂದಿಸುವುದಿಲ್ಲ, ನಿಮ್ಮ ಶೂನಲ್ಲಿರುವ ಕಲ್ಲುಗಳು ನಿಮ್ಮ ಶಕ್ತಿ ಕುಂದಿಸುತ್ತವೆ.''
8. "ನನ್ನನ್ನು ಪ್ರೀತಿಸಿದಷ್ಟೇ ಜನರು ಎಲ್ಲರನ್ನೂ ಪ್ರೀತಿಸಬೇಕು ಎಂದು ನಾನು ಬಯಸುತ್ತೇನೆ. ಆಗ ಈ ಜಗತ್ತು ಉತ್ತಮವಾಗುತ್ತದೆ."
9. "ಉತ್ತಮ ಉತ್ತರ ನಿಮಗೆ ಹೊಳೆಯದಿದ್ದರೆ ಆಗ ಮೌನ ಬಂಗಾರವಾಗುತ್ತದೆ.''
10. "ನಾನು ಸಿಟ್-ಅಪ್ ಗಳನ್ನು ಲೆಕ್ಕ ಮಾಡುವುದಿಲ್ಲ. ನೋವಾಗಲು ಶುರುವಾದಾಗ ಮಾತ್ರ ನಾನು ಅವುಗಳನ್ನು ಲೆಕ್ಕ ಮಾಡಲು ಆರಂಭಿಸುತ್ತೇನೆ. ಈ ಸಿಟ್-ಅಪ್ ಗಳೇ ನಿಜವಾಗಿ ಲೆಕ್ಕ ಹಾಕುವಂತಹವು. ಅದೇ ನಿಮ್ಮನ್ನು ಚಾಂಪಿಯನ್ ಆಗಿಸುವುದು.'