×
Ad

ಪುತ್ತೂರು-ಉಜ್ರುಪಾದೆ ದಫ್ ಸ್ಪರ್ಧೆ : ಬಪ್ಪಳಿಗೆ ತಂಡಕ್ಕೆ ಪ್ರಶಸ್ತಿ

Update: 2016-06-04 16:54 IST

ಪುತ್ತೂರು : ಇಲ್ಲಿನ ಬಲ್ನಾಡು-ಉಜ್ರುಪಾದೆ ರಹ್ಮಾನಿಯಾ ಜುಮಾ ಮಸೀದಿ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಉಜ್ರುಪಾದೆ ಶಾಖಾ ವತಿಯಿಂದ ಎಸ್ಕೆಸ್ಸೆಸ್ಸೆಫ್ ನೂತನ ಕಛೇರಿ ಉದ್ಘಾಟನೆ, ತಖಿಯುದ್ದೀನ್ ಕೋಯಕುಟ್ಟಿ ಉಸ್ತಾದ್ ಅನುಸ್ಮರಣೆ ಹಾಗೂ ಪುತ್ತೂರು ತಾಲೂಕು ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮವು ಉಜ್ರುಪಾದೆ ಸಂಶುಲ್ ಉಲಮಾ ನಗರದಲ್ಲಿ ಗುರುವಾರ ರಾತ್ರಿ ನಡೆಯಿತು.

ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಯುನಿಟಿ ಹಸನ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ಕೇಂದ್ರ ಮಸೀದಿ ಅಧ್ಯಕ್ಷ ಮುಸ್ತಫಾ ಹಾಜಿ ಕೆಂಪಿ ಉದ್ಘಾಟಿಸಿದರು. ಮುಝಮ್ಮಿಲ್ ತಂಙಳ್, ಯು.ಪಿ. ಉಸ್ಮಾನ್ ಮೌಲವಿ ದುವಾ ನೆರವೇರಿಸಿದರು. ಉಜ್ರುಪಾದೆ ಜುಮಾ ಮಸೀದಿ ಅಧ್ಯಕ್ಷ ಯು.ಪಿ. ಮುಹಮ್ಮದ್ ಸುಲ್ತಾನ್ ಧ್ವಜಾರೋಹಣಗೈದರು.

ಬಪ್ಪಳಿಗೆ ಮಸ್ಜಿದುನ್ನೂರು ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ, ಕುಂಬ್ರ ಕೆಐಸಿ ಮ್ಯಾನೇಜರ್ ಹುಸೈನ್ ದಾರಿಮಿ ರೆಂಜಲಾಡಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್ ಮೊದಲಾದವರು ಮಾತನಾಡಿದರು. ಉದ್ಯಮಿ ಪೂಪಿ ಅಬೂಬಕ್ಕರ್ ಕನಕಮಜಲು ದಫ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯ ಯು. ಮುಸ್ತಫಾ, ಎಸ್ಕೆಎಸ್ಸೆಸ್ಸೆಫ್ ಉಜ್ರುಪಾದೆ ಶಾಖಾಧ್ಯಕ್ಷ ನಾಸಿರ್ ದಾರಿಮಿ, ಪುತ್ತೂರು ವಲಯಾಧ್ಯಕ್ಷ ತಾಜುದ್ದೀನ್ ರಹ್ಮಾನಿ, ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಪುತ್ತೂರು ಪುರಸಭಾ ಸದಸ್ಯ ಮುಹಮ್ಮದ್ ಅಲಿ, ಉಮ್ಮರ್ ಯಮಾನಿ ಕಾರ್ಜಾಲ್, ಯು.ಆರ್. ಶರೀಫ್ ದಾರಿಮಿ ಬಂಗೇರುಕಟ್ಟೆ, ಲೌಲಿ ಹಮೀದ್ ಬಪ್ಪಳಿಗೆ, ಕೆ. ಯೂಸುಫ್ ಹಾಜಿ ಕೈಕಾರ, ಅಬ್ದುಲ್ ಅಝೀರ್ ಬುಶ್ರಾ, ರಶೀದ್ ಹಾಜಿ ಪರ್ಲಡ್ಕ, ಯೂಸುಫ್ ಗೌಸಿಯಾ ಸಾರ್ಯ, ಹಾಜಿ ಅಬ್ದುಲ್ಲಾ, ಅಬ್ದುಲ್ ರಝಾಕ್ ಹಾಜಿ ಎಲ್.ಟಿ., ಹಸೈನಾರ್ ಹಾಜಿ, ಸಿದ್ದೀಕ್ ಸುಲ್ತಾನ್ ಆರ್.ಎಚ್., ಕೆ. ಯೂಸುಫ್ ಹಾಜಿ ಕೆವೈಪಿ, ವಿ.ಕೆ. ಶರೀಫ್ ಬಪ್ಪಳಿಗೆ, ಶಮೂನ್ ಪರ್ಲಡ್ಕ, ಸೂಫಿ ಬಪ್ಪಳಿಗೆ, ಬಾತಿಷ್ ಪಾಟ್ರಕೋಡಿ, ಶಾಫಿ ಕೆವೈಪಿ, ಅಬೂಬಕ್ಕರ್ ಮುಲಾರ್, ಶರೀಫ್ ಸಾಲ್ಮರ, ಝಾಕಿರ್ ಹುಸೈನ್, ನೂರುದ್ದೀನ್ ಸಾಲ್ಮರ, ಅಶ್ರಫ್ ಪಿ.ಎಂ. ಮುಕ್ವೆ, ಅಶ್ರಫ್ ಮೆಸ್ಕಾಂ, ಸಾದಿಕ್ ಮೌಲವಿ, ಅಬೂಬಕ್ಕರ್ ಬಲ್ನಾಡು, ರಫೀಕ್ ಯು.ಪಿ., ಅಬ್ದುಲ್ ರಹಿಮಾನ್ ಉಜ್ರುಪಾದೆ, ಹಮೀದ್ ಹಾಜಿ ಉಜ್ರುಪಾದೆ, ಸಿರಾಜ್ ಬಲ್ನಾಡು, ನಝೀರ್ ಬಲ್ನಾಡು, ಉಮ್ಮರ್ ಬಿ.ಕೆ., ರಝಾಕ್ ಬಪ್ಪಳಿಗೆ ಮೊದಲಾದವರು ಭಾಗವಹಿಸಿದ್ದರು.

ಬಪ್ಪಳಿಗೆ ತಂಡಕ್ಕೆ ದಫ್ ಪ್ರಶಸ್ತಿ

ಪುತ್ತೂರು ತಾಲೂಕು ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಬಪ್ಪಳಿಗೆ ಸುಲ್ತಾನ್ ಮೆಮೋರಿಯಲ್ ದಫ್ ತಂಡ ಪ್ರಥಮ, ಸಂಪ್ಯ ರಿಫಾಯಿಯ್ಯ ದಫ್ ತಂಡ ದ್ವಿತೀಯ ಹಾಗೂ ದಖೀರತುಲ್ ಉಖ್‌ರಾ ದಫ್ ತಂಡ ಬನ್ನೂರು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಪ್ಯ ತಂಡದ ಆಶಿಕ್ ಸಂಪ್ಯ ಅತ್ಯುತ್ತಮ ಹಾಡುಗಾರರಾಗಿ ಮೂಡಿಬಂದರು.

ಇದೇ ವೇಳೆ ಇತ್ತೀಚೆಗೆ ನಿಧನರಾದ ಹಿರಿಯ ದಫ್ ಉಸ್ತಾದ್ ಕೆ.ಇ. ಮುಹಮ್ಮದ್ ಕೋಡಿ-ಕುಂದಾಪುರ ಅವರನ್ನು ಅನುಸ್ಮರಿಸಲಾಯಿತು. ಕೆಎಂಎ ಕೊಡುಂಗಾಯಿ, ರಫೀಕ್ ಮುಸ್ಲಿಯಾರ್ ಕಡಂಬು ಹಾಗೂ ಶಾಫಿ ಬೆಳ್ತಂಗಡಿ ತೀರ್ಪುಗಾರರಾಗಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News