ಮೂಡುಬಿದಿರೆ: ವಿವೇಕಾನಂದರ ಚಿಂತನೆಗಳ ಪುನರಾವಲೋಕನ
ಮೂಡುಬಿದಿರೆ: ಪ್ರಪಂಚದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೂರ್ವ, ಪಶ್ಮಿಮದವರು ಪ್ರಯತ್ನಿಸಿದ್ದಾರೆ. ಆದ್ಯಾತ್ಮದ ಮೂಲಕ ಭಾರತೀಯರು ಪ್ರಪಂಚದ ಸಮಸ್ಯೆಗಳನ್ನು ದೂರವಾಗಿಸುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅನನ್ಯವಾದ ಆಧ್ಮಾತ್ಮ ಚಿಂತನೆಗಳ ಮೂಲಕ ವಿಶ್ವದ ಸಂತರಾದವರು ವಿವೇಕಾನಂದರು. ಆದುನಿಕ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಅನುಷ್ಠಾನಗೊಳಿಸಲು ವಿವೇಕಾನಂದರಂತಹ ಚಿಂತಕರ ದೃಷ್ಠಿಕೋನ, ಅವುಗಳ ಪುನಾರವಲೋಕನ ಅಗತ್ಯ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಧರ್ಮ ಮತ್ತು ಎಥಿಕ್ಸ್ ಸರಣಿಯ ಎಂಟನೇ ವಿಚಾರ ಸಂಕಿರಣವಾಗಿ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ವಿವೇಕಾನಂದರ ಚಿಂತನೆಗಳ ಪುನರಾವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಇಂಡಿಯಾ ಪ್ಲಾಟ್ಫಾರ್ಮ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮಕ್ಕೆ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ಕೇಂದ್ರ, ಗೆಂಟ್ ಯೂನಿವರ್ಸಿಟಿ, ವಿಶ್ವವಿದ್ಯಾಲಯ. ಬೆಲ್ಜಿಯಂ ಹಾಗೂ ಉಜಿರೆಯ ಎಸ್. ಡಿ.ಎಂ. ಸಮಾಜ ಶಾಸ್ತ್ರ ಮತ್ತು ಮಾನವಿಕ ಅಂತರ್ ವಿಭಾಗೀಯ ಸಂಶೋಧನಾ ಕೇಂದ್ರ ಸಹಯೋಗ ನೀಡಿತ್ತು. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ರಾಜಾರಾಮ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ ಇದರ ಭಾರತ ಅಧ್ಯಯನ ವಿಭಾಗದ ಪ್ರೊ. ಜೇಕಬ್ ಡಿ ರೂವರ್ ಮುಖ್ಯ ಅತಿಥಿಯಾಗಿದ್ದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿದರು. ಶ್ರೀನಿವಾಸ್ ಪೆಜತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಭಾರತ ಸಹಿತ ಚೆಕ್ ರಿಪಬ್ಲಿಕ್, ನೆಥೆರ್ಲ್ಯಾಂಡ್ ಮತ್ತು ಬೆಲ್ಜಿಯಂ ದೇಶನ 40 ದೇಶೀ ಮತ್ತು ವಿದೇಶಿ ಸಂಶೋಧಕರು ಎರಡು ದಿನಗಳ ಕಾಲ ವಿವೇಕಾನಂದರು, ಹಿಂದುತ್ವದ ಭಾರತಿಕರಣ, ವಿವೇಕಾನಂದರ ಕುರಿತಾದ ವಸಾಹತುವಾದ, ವಿವೇಕಾನಂದರ ಧೃಷ್ಟಿಕೋನದಲ್ಲಿ ಜಾತಿ ಮತ್ತು ವರ್ಣ. ಸಾಮಾಜಿಕ ಮತ್ತು ಹಿಂದೂ ಪುನರುತ್ಹಾನ ಮುಂತಾದ ವಿಚಾರಗಳ ಕುರಿತು ಚರ್ಚೆ, ವಿಚಾರ ವಿನಿಮಯವನ್ನು ಇದು ವೇದಿಕೆ
ಪ್ರೊ. ಜೇಕಬ್ ಡಿ ರೂವರ್