×
Ad

ಬೆಳ್ತಂಗಡಿ,ಜೂ.4 : ನಿವೃತ್ತರು ತಟಸ್ಥರಾಗದೇ ಸದಾ ಕ್ರಿಯಾಶೀಲರಾಗಬೇಕು: ಶಾಸಕ ಬಂಗೇರ

Update: 2016-06-04 21:40 IST

ಬೆಳ್ತಂಗಡಿ: ನಿವೃತ್ತ ನೌಕರರು ಹಿರಿಯ ಅನುಭವಿಗಳೂ, ತಜ್ಞರೂ ಆಗಿದ್ದು ತಟಸ್ಥರಾಗದೇ ಸದಾ ಕ್ರಿಯಾಶೀಲರಾಗಬೇಕು. ಕಾನೂನಿನ ಬಗ್ಗೆ ಮಾಹಿತಿ, ಅರಿವು ಇದ್ದು ಚಿಂತನ-ಮಂಥನ ನಡೆಸಿ ಸಮಾಜದ ಹಿತಕ್ಕಾಗಿ ಶ್ರಮಿಸಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
 ಅವರು ಶನಿವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ಮತ್ತು ವಾಷಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ಹಿರಿಯ ವಕೀಲ ಜೆ.ಕೆ. ಪೌಲ್ ಅವರು ದೈನಂದಿನ ಜೀವನದಲ್ಲಿ ಕಾನೂನು ಪಾಲನೆಯ ಬಗ್ಗೆ ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 624 ಅಂಕಗಳಿಸಿ ರಾಜ್ಯದಲ್ಲಿ ಎರಡನೇ ಸ್ಥಾನಗಳಿಸಿದ ಲಾಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. ಅವರನ್ನು ಸನ್ಮಾನಿಸಲಾಯಿತು. ಡಿ.ಎಂ. ಭಟ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜ್ಯ ಕಾರ್ಯದರ್ಶಿ ಜಯಕೀರ್ತಿ ಜೈನ್ ಶುಭಾಶಂಸನೆ ಮಾಡಿದರು. ವಸಂತ ಸುವರ್ಣ ವಾರ್ಷಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು. ತೆರೇಸಾ ಲೋಬೊ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News