×
Ad

ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರಿಗೆ ಏರ್ ಇಂಡಿಯಾದಲ್ಲಿ ಬ್ಯುಸಿನೆಸ್ ಕ್ಲಾಸ್ ಯೋಗ

Update: 2016-06-04 22:27 IST

ಹೊಸದಿಲ್ಲಿ, ಜೂ.4: ಜೈ ಜವಾನ್ ಎನ್ನುವುದು ಮಹಾರಾಜರ ಕಾಲದ ಹೇಳಿಕೆ. ಇದನ್ನು ಅಕ್ಷರಶಃ ಪಾಲಿಸಲು ಏರ್ ಇಂಡಿಯಾ ಮುಂದಾಗಿದ್ದು, ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರಿಗೆ ದೇಶದೊಳಗಿನ ವಿಮಾನಯಾನಕ್ಕೆ ಬ್ಯುಸಿನೆಸ್ ಕ್ಲಾಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಇಂಥ ಪ್ರಶಸ್ತಿ ಪುರಸ್ಕೃತ ಯೋಧರು ಅಥವಾ ಮಾಜಿ ಯೋಧರಿಗೆ ಅವರ ಟಿಕೆಟ್‌ಗೆ ಅನುಗುಣವಾಗಿ ಎಕಾನಮಿ ಕ್ಲಾಸ್ ವಿಮಾನ ಪ್ರವೇಶ ಪಾಸ್ ನೀಡಲಾಗುವುದು. ಆದರೆ ಪ್ರವೇಶ ಗೇಟ್‌ನಲ್ಲಿ ಆಸನ ಲಭ್ಯತೆ ನೋಡಿಕೊಂಡು ಅದನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ.
ಈ ನಿರ್ಧಾರ ತಕ್ಷಣದಿಂದ ಜಾರಿಗೆ ಬರಲಿದೆ. ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ ಹಾಗೂ ಶೌರ್ಯ ಚಕ್ರ ವಿಜೇತರಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತದೆ. ನಮ್ಮ ಯೋಧರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಆದ್ದರಿಂದ ಕನಿಷ್ಠ ಅವರನ್ನು ಈ ರೀತಿಯಲ್ಲಿ ಗೌರವಿಸುವುದು ನಮ್ಮ ಉದ್ದೇಶ ಎಂದು ಹಿರಿಯ ಅಧಿಕಾರಿ ಅಶ್ವಿನಿ ಲೋಹಾನಿ ಹೇಳಿದ್ದಾರೆ.
ಈ ಸೌಲಭ್ಯ ಪಡೆಯಲು ಸೈನಿಕರು ತಮ್ಮ ಗುರುತುಪತ್ರದ ಪ್ರತಿಯನ್ನು ಚೆಕ್ ಇನ್ ಕೌಂಟರ್‌ನಲ್ಲಿ ನೀಡಬೇಕು. ಆದರೆ ಕುಟುಂಬ ಸದಸ್ಯರು ಜೊತೆಗೆ ಇಲ್ಲದಿದ್ದ ಸಂದರ್ಭದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ ಎಂದು ವಿವರಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News