ಫಾಝ್ವೀನಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
Update: 2016-06-04 22:52 IST
ಮುಲ್ಕಿ, ಜೂ.4: ಸುರತ್ಕಲ್ ಗೈಡ್ ಕಾಲೇಜಿನ ವಿದ್ಯಾರ್ಥಿನಿ ಫಾಝ್ವೀನಾ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ 556 ಅಂಕಗಳೊಂದಿಗೆ ಶೇ. 92.66 ಫಲಿತಾಂಶ ದಾಖಲಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು, ಮುಲ್ಕಿ ಕೆ.ಎಸ್.ರಾವ್‌ನಗರ ನಿವಾಸಿ ಮುಹಮ್ಮದ್ ಅಲಿ ಹಾಗೂ ಆಯಿಶಾ ದಂಪತಿಯ ಪುತ್ರಿ. ಉತ್ತಮ ಸಾಧನೆ ಗೈದ ಇವರನ್ನು ಗ್ರಾಮಸ್ಥರು ಹಾಗೂ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.