ಮನೆಯಿಂದ ಚಿನ್ನಾಭರಣ ಕಳವು
Update: 2016-06-04 23:39 IST
ಕಾರ್ಕಳ, ಜೂ.4: ಸಾಣೂರು ಪುಲ್ಕೇರಿ ಬೈಪಾಸ್ ಎಂಬಲ್ಲಿರುವ ಮನೆಯೊಂದಕ್ಕೆ ಜೂ.2ರಂದು ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸುಂದರ ಶೆಟ್ಟಿ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಡಿಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಕಪಾಟುಗಳಲ್ಲಿ ಇಟ್ಟಿದ್ದ ಸುಮಾರು 39 ಪವನ್ ತೂಕದ ಚಿನ್ನಾಭರಣ ಮತ್ತು ಸುಮಾರು 20 ಸಾವಿರ ವೌಲ್ಯದ ರ್ಯಾಡೋ ಕಂಪೆನಿಯ ವಾಚನ್ನು ಕಳವುಗೈದಿದ್ದಾರೆ.
ಇವುಗಳ ಒಟ್ಟು ವೌಲ್ಯ ಸುಮಾರು 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.