ಯುವತಿಯ ಅತ್ಯಾಚಾರ: ಆರೋಪಿ ಸೆರೆ
Update: 2016-06-04 23:41 IST
ಕಾಸರಗೋಡು, ಜೂ.4: ವಿವಾಹವಾಗುವ ಭರವಸೆ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಯನ್ನು ಮೂರು ವರ್ಷಗಳ ಬಳಿಕ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬದಿಯಡ್ಕ ಚಂಬಲ್ತಿಮಾರ್‌ನ ಸಿ. ಎಚ್. ಸುರೇಶ್ (30) ಎಂದು ಗುರುತಿಸಲಾಗಿದೆ. ಪೆರ್ಲ ಪಡ್ರೆಯ ಯುವತಿಯ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. 2013ರ ಫೆ. 4ರಂದು ವಿವಾಹವಾಗುವುದಾಗಿ ಭರವಸೆ ನೀಡಿದ್ದ ಆರೋಪಿ ಸುರೇಶ್ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದರಿಂದ ಯುವತಿ ಗರ್ಭಿಣಿಯಾಗಿದ್ದು, ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ.