ಸೆ.30ರವರೆಗೆ ಕಂದಾಯ ಅದಾಲತ್ ಅವಧಿ ವಿಸ್ತರಣೆ: ಪ್ರಮೋದ್

Update: 2016-06-04 18:18 GMT

ಮಂಗಳೂರು, ಜೂ.4: ದ.ಕ. ಜಿಲ್ಲೆಯಲ್ಲಿ ಆರ್‌ಟಿಸಿಗಳ ತಿದ್ದುಪಡಿ ಬಾಕಿ ಇರುವ ಕಡತಗಳನ್ನು ಕಂದಾಯ ಅದಾಲತ್‌ಗಳ ಮೂಲಕ ವಿಲೇ ಮಾಡುವ ಕಾಲಾವಧಿಯನ್ನು ಸೆಪ್ಟಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ತಿಳಿಸಿದರು.

ದ.ಕ. ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಸಿ ಅಕಾರಿಗಳ ಜೊತೆ ಜಿಲ್ಲಾಕಾರಿ ಕಚೇರಿಯಲ್ಲಿ ವಿಲೇಗೆ ಬಾಕಿ ಇರುವ ಒಂದು ವರ್ಷಕ್ಕಿಂತ ಹಳೆಯ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಂದಾಯ ಅದಾಲತ್ ಮೂಲಕ ಆರ್‌ಟಿಸಿಗಳ ತಿದ್ದುಪಡಿ ಜವಾಬ್ದಾರಿಯನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರ್‌ಗೆ ವಹಿಸಿ ವಿಲೇ ಮಾಡುವ ಅವಧಿ ಮಾರ್ಚ್ 31ಕ್ಕೆ ಮುಗಿದಿತ್ತು. ಆದರೆ ಅಕಾರಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ತನ್ನ ಶಿಾರಸಿನ ಮೇರೆಗೆ ಅವಯನ್ನು ವಿಸ್ತರಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 375 ಕಂದಾಯ ಅದಾಲತ್‌ಗಳ ಮೂಲಕ 31,293 ಆರ್‌ಟಿಸಿಗಳನ್ನು ತಿದ್ದುಪಡಿ ಮಾಡಲಾಗಿದೆ. 5,174 ಅರ್ಜಿಗಳು ವಿಲೇಗೆ ಬಾಕಿ ಇವೆ ಎಂದು ಅವರು ಹೇಳಿದರು. ಡೀಮ್ಡ್ ಾರೆಸ್ಟ್‌ನಿಂದ 86,115 ಎಕರೆ ಭೂಮಿ ಕಂದಾಯ ಇಲಾಖೆಗೆ

ದ.ಕ. ಜಿಲ್ಲೆಯಲ್ಲಿ ಸರಕಾರಿ ಜಾಗವನ್ನು ಡೀಮ್ಡ್ ಾರೆಸ್ಟ್ (ರಕ್ಷಿತಾರಣ್ಯ) ಎಂದು ಪರಿಗಣಿಸಲಾಗಿದ್ದ 1,54,262 ಎಕರೆ ಭೂಮಿಯಲ್ಲಿ 86,115 ಎಕರೆ ಭೂಮಿಯನ್ನು ರಕ್ಷಿತಾರಣ್ಯದಿಂದ ವಿಮುಕ್ತಗೊಳಿಸಿ ಕಂದಾಯ ಇಲಾಖೆಗೆ ಒಳಪಡಿಸುವ ಮೂಲಕ ನಿವೇಶನರಹಿತರಿಗೆ ಬಳಸಿಕೊಳ್ಳಬಹುದಾಗಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಹೇಳಿದರು. ರಾಜ್ಯದ ಅರಣ್ಯ ಸಚಿವರ ಮುತುವರ್ಜಿಯಲ್ಲಿ ಜಂಟಿ ಸರ್ವೆ ನಡೆಸಿ 68,146 ಎಕರೆ ಮಾತ್ರ ಸದ್ಯ ರಕ್ಷಿತಾರಣ್ಯವಾಗಿ ನಿಗದಿಪಡಿಸಲಾಗಿದೆ. ಉಳಿದ ಭೂಮಿಯನ್ನು ಕಂದಾಯ ಇಲಾಖೆಗೆ ನೀಡಿರುವುದರಿಂದ ಅದನ್ನು ಬಡವರಿಗೆ ಹಂಚಲು ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.

ವಿಲೇಗೆ ಬಾಕಿ ಇರುವ ಅರ್ಜಿಗಳಿಗೆ ಸಮಯ ನಿಗದಿ: ಕಂದಾಯ ಇಲಾಖೆಯಲ್ಲಿ ಸರ್ವೆಯರ್, ತಹಶೀಲ್ದಾರ್, ಎಸಿ ಹಾಗೂ ಡಿಸಿ, ಕಂದಾಯ ನಿರೀಕ್ಷಕರು, ಜಿಲ್ಲಾ ರಿಜಿಸ್ಟ್ರಾರ್, ಸಬ್ ರಿಜಿಸ್ಟ್ರಾರ್, ಡಿಡಿಎಲ್‌ಆರ್, ಎಡಿಎಲ್‌ಆರ್ ಸೇರಿದಂತೆ ಎಲ್ಲಾ ಅಕಾರಿಗಳ ಬಳಿ ಸರಕಾರದಿಂದ ನಿವೇಶನ ಪಡೆದವರ ಆರ್‌ಟಿಸಿ ತಿದ್ದುಪಡಿ, ಪಟ್ಟಾ ಜಾಗದ ಆರ್‌ಟಿಸಿ ತಿದ್ದುಪಡಿ, ಭೂಸುಧಾರಣಾ ಜಮೀನು ಸಮಸ್ಯೆ, ಸರ್ವೆ ಸೂಪರ್‌ವೈಸರ್ಸ್, ಆರ್‌ಟಿಸಿ ರಚನೆಗಳ ವ್ಯತ್ಯಾಸಗಳು ಸೇರಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ವಿಲೇಗೆ ಬಾಕಿ ಇರುವ ಕಡತಗಳನ್ನು ನಿಗದಿತ ಸಮಯದೊಳಗೆ ವಿಲೇ ಮಾಡಲು ಇಂದು ಸಭೆಯಲ್ಲಿ ಅಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪೋಡಿ ಮುಕ್ತ ಗ್ರಾಮದಡಿ ದ.ಕ. ಜಿಲ್ಲೆಯಲ್ಲಿ 45 ಗ್ರಾಮಗಳನ್ನು ಪ್ರಥಮ ಹಂತವಾಗಿ ಆಯ್ದುಕೊಳ್ಳಲಾಗಿದ್ದು, ಅದರಡಿ 17,171 ಆರ್‌ಟಿಸಿಗಳನ್ನು ಸಮರ್ಪಕಗೊಳಿಸುವ ಮೂಲಕ ಶೇ.68ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ, ಹೆಚ್ಚುವರಿ ಜಿಲ್ಲಾಕಾರಿ ಕುಮಾರ್, ಸಹಾಯಕ ಆಯುಕ್ತರಾದ ಡಾ.ಅಶೋಕ್ ಮತ್ತು ಡಾ.ರಾಜೇಂದ್ರ ಉಪಸ್ಥಿತರಿದ್ದರು.

ಜಾಗ ಸಕ್ರಮಗೊಳಿಸಲು ಅವಕಾಶ

ಗ್ರಾಮಾಂತರ ಪ್ರದೇಶದಲ್ಲಿ 94 ಸಿ ಅನ್ವಯ ಸರಕಾರಿ ಜಾಗದಲ್ಲಿ ವಾಸವಿರುವವರಿಗೆ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4ರವರೆಗೆ ಅವಕಾಶವಿದ್ದು, 9 ಸೆಂಟ್ಸ್‌ವರೆಗೆ ಜಾಗ ಮಂಜೂರಾತಿಗೆ ಅವಕಾಶ ಇದೆ. 94 ಸಿಸಿ ಅನ್ವಯ ನಗರ ಪ್ರದೇಶದವರು ಆಗಸ್ಟ್ 27ರೊಳಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ದಂಡದ ಮಿತಿಯನ್ನು ಕಡಿತಗೊಳಿಸಿ ಸಚಿವ ಸಂಪುಟ ನಿರ್ಧಾರ ಮಾಡಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದು ಪ್ರಮೋದ್ ಮಧ್ವರಾಜ್ ಈ ಸಂದರ್ಭ ತಿಳಿಸಿದರು.

ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಸೇರಿದಂತೆ ಐದು ಗ್ರಾಮಗಳ ಗ್ರಾಮಸ್ಥರು ಎಂಆರ್‌ಪಿಎಲ್‌ಗೆ ಭೂಸ್ವಾೀನಕ್ಕೆ ಸಂಬಂಸಿ ಶುಕ್ರವಾರ ತಮ್ಮಲ್ಲಿ ಮನವಿ ಸಲ್ಲಿಸಿ ಆತಂಕ ವ್ಯಕ್ತಪಡಿಸಿದ್ದು, ಅಲ್ಲಿಯ ಜನರಿಗೆ ಪ್ರಮುಖ ಆದ್ಯತೆಯ ನೆಲೆಯಲ್ಲಿ ಪಕ್ಕಾ ಆರ್‌ಟಿಸಿಯನ್ನು ಒದಗಿಸುವಂತೆ ಅಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದವರು ಹೇಳಿದರು.

ಭೂಸುಧಾರಣಾ ಕಾಯ್ದೆ ಉಲ್ಲಂಘನೆ ದೂರು: ಪರಿಶೀಲನೆ
ಧರ್ಮಸ್ಥಳ ಧರ್ಮಾಧಿಕಾರಿಗಳ ಕುಟುಂಬವು ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಸಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆಂಬ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ. ಅದನ್ನು ಪರಿಶೀಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರಮೋದ್ ಉತ್ತರಿಸಿದರು.

ವರ್ಷಗಳಲ್ಲಿ ಆಗದ್ದು 3 ದಿನಗಳಲ್ಲಿ ಇತ್ಯರ್ಥ!

ಭೂಸುಧಾರಣಾ ಕಾಯ್ದೆಯಡಿ ತಹಶೀಲ್ದಾರರ ಕಚೇರಿಯಲ್ಲಿ 421 ಕಡತಗಳು ವಿಲೇಗೆ ಬಾಕಿ ಇದ್ದು, ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ಸೂಚಿಸ ಲಾಗಿದೆ. ಸರ್ವೆ ಸೂಪರ್‌ವೈಸರ್ ಬಳಿ 1 ವರ್ಷ ಮೇಲ್ಪಟ್ಟ 69 ಪ್ರಕರಣಗಳಿದ್ದು, ಅವುಗಳನ್ನು ಮೂರು ದಿನಗಳಲ್ಲಿ ಇತ್ಯರ್ಥ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅವುಗಳನ್ನು ಕನಿಷ್ಠ 10 ನಿಮಿಷಗಳಲ್ಲಿ ವಿಲೇ ಮಾಡಬಹುದಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News