×
Ad

ಮಂಗಳೂರು: ‘ಸುನ್ನೀ ಸಂದೇಶ’ದ 14ನೆ ವರ್ಷಾಚರಣೆ

Update: 2016-06-05 00:05 IST

ಮಂಗಳೂರು, ಜೂ. 4: ಸುನ್ನೀ ಸಂದೇಶ ಮಾಸ ಪತ್ರಿಕೆಯ 14ನೆ ವರ್ಷದ ಸಂಭ್ರಮಾಚರಣೆ ಸಮಾರಂಭ ಶುಕ್ರವಾರ ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಿತು.
ಸಮಾರಂಭವನ್ನು ಸಮಸ್ತ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಉದ್ಘಾಟಿಸಿ ಶುಭ ಹಾರೈಸಿದರು. ಮಿತ್ತಬೈಲ್ ಜಬ್ಬಾರ್ ಉಸ್ತಾದ್ ದುಆಗೈದರು. ಇದೇವೇಳೆ ಸಮಸ್ತದ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ತ್ವಾಕ ಅಹ್ಮದ್ ಖಾಸಿಂ ಉಸ್ತಾದ್, ಬಂಬ್ರಾಣ ಉಸ್ತಾದ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಫಾರೂಕ್ ಉಳ್ಳಾಲ್, ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ಗೋಳ್ತಮಜಲು ಅವರನ್ನು ಸನ್ಮಾನಿಸಲಾಯಿತು.
ಎಸ್‌ವೈಎಸ್ ಕೇಂದ್ರೀಯ ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್ ಪೋಕೊಟೂರು ಮುಖ್ಯ ಭಾಷಣ ಮಾಡಿದರು. ಸುನ್ನೀ ಸಂದೇಶದ ರಮಝಾನ್ ವಿಶೇಷ ಸಂಚಿಕೆಯನ್ನು ಆಲಿಕುಟ್ಟಿ ಉಸ್ತಾದ್‌ರವರು ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್‌ರಿಗೆಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು.
ಮಾಜಿ ಮೇಯರ್ ಕೆ.ಅಶ್ರಫ್, ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ಲತೀಫ್, ಉಸ್ಮಾನ್, ಆಸ್ಕೊ ಹಾಜಿ, ಹನೀಫ್ ಹಾಜಿ, ಮಸೂದ್ ಹಾಜಿ, ಬಾಶಾ ತಂಙಳ್, ಸುಲೈಮಾನ್ ಹಾಜಿ ಕಲ್ಲಡ್ಕ, ರಿಯಾಝ್ ಹಾಜಿ ಬಂದರ್, ಲತೀಫ್ ದಾರಿಮಿ ರೆಂಜಾಡಿ, ಅಬ್ದುಲ್ಲ ಎಂ.ಎ. ರೆಂಜಾಡಿ, ಹಕೀಂ ಪರ್ತಿಪ್ಪಾಡಿ, ಗೋಲ್ಡನ್ ತಂಙಳ್ ಉಳ್ಳಾಲ, ನಸೀಂ ಹಾಜಿ ಕಣ್ಣೂರು, ಮಜೀದ್ ಹಾಜಿ ಕಣ್ಣೂರು, ಬಶೀರ್ ಹಾಜಿ, ಕುಕ್ಕಿಲ ದಾರಿಮಿ, ಇಬ್ರಾಹೀಂ ಬಾಖವಿ, ಮೆಟ್ರೊ ಶಾಹುಲ್ ಹಮೀದ್ ಹಾಜಿ, ಶರೀಫ್ ಫೈಝಿ ಕಡಬ, ಅಬ್ದುಸ್ಸತ್ತಾರ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.
 ಕಾರ್ಯಕ್ರಮಕ್ಕೂ ಮುನ್ನ ಬಂದರ್‌ನ ಜಲಾಲ್ ವೌಲಾ ದರ್ಗಾ ಝಿಯಾರತ್‌ಗೆ ಆಲಿಕುಟ್ಟಿ ಉಸ್ತಾದ್ ನೇತೃತ್ವ ನೀಡಿದರು. ಮದ್ರಸ ಮ್ಯಾನೇಜ್‌ಮೆಂಟ್‌ನ ದ.ಕ. ಜಿಲ್ಲಾಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ ಧ್ವಜಾರೋಹಣಗೈದರು. ಕೆ.ಎಲ್.ಉಮರ್ ದಾರಿಮಿ ಸ್ವಾಗತಿಸಿದರು. ಮುಸ್ತಫಾ ಫೈಝಿ ಕಿನ್ಯ ವಂದಿಸಿದರು. ಕುಕ್ಕಿಲ ದಾರಿಮಿ ಹಾಗೂ ಇರ್ಫಾನ್ ವೌಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News