ಬರ: ಕಾಸರಗೋಡಿನಲ್ಲಿ 3 ಕೋ.ರೂ. ವೌಲ್ಯದ ಬೆಳೆಹಾನಿ
Update: 2016-06-05 00:05 IST
ಕಾಸರಗೋಡು, ಜೂ.4: ಈ ಬಾರಿಯ ಬರಗಾಲದಿಂದ ಜಿಲ್ಲೆಯಲ್ಲಿ 3 ಕೋ.ರೂ . ವೌಲ್ಯದ ಬೆಳೆ ಹಾನಿಯಾಗಿರುವುದಾಗಿ ಕೃಷಿ ಇಲಾಖೆ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.
12 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಕೃಷಿನಾಶ ಉಂಟಾಗಿದೆ. ಎಪ್ರಿಲ್ 3ರಿಂದ ಮೇ 31ರ ತನಕದ ಅಂಕಿ ಅಂಶದಂತೆ 1,031 ಕೃಷಿಕರು ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ.
ಜಿಲ್ಲೆಯಲ್ಲಿ 1,039,122 ಹೆಕ್ಟೇರ್ ಸ್ಥಳದ ಕೃಷಿ ಬರಗಾಲದಿಂದ ನೆಲಕ್ಕಚ್ಚಿದೆ. ಅಡಿಕೆ, ಬಾಳೆ ಮತ್ತು ತೆಂಗು ಹಾಗೂ ತರಕಾರಿ ಅತ್ಯಧಿಕ ಪ್ರಮಾಣದಲ್ಲಿ ನಾಶಗೊಂಡಿದೆ ಎಂದು ವರದಿ ತಿಳಿಸಿದೆ.