ಸಿಎಫ್‌ಐ: ಇಂದಿನಿಂದ ಹೆಲ್ತಿ ಕ್ಯಾಂಪಸ್ ಅಭಿಯಾನ

Update: 2016-06-04 18:39 GMT

ಮಂಗಳೂರು, ಜೂ.4: ಆರೋಗ್ಯಕರ ಕ್ಯಾಂಪಸ್ ನಿರ್ಮಾಣದ ಆಶಯದೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ಜೂ.5ರಿಂದ 20ರವರೆಗೆ ರಾಜ್ಯವ್ಯಾಪಿ ‘ಹೆಲ್ತಿ ಕ್ಯಾಂಪಸ್’ ಅಭಿಯಾನ ಹಮ್ಮಿಕೊಂಡಿದೆ. ಸಸಿ ನೆಡುವುದು, ಕ್ಯಾಂಪಸ್ ಸ್ವಚ್ಛತೆ, ಮ್ಯಾರಥಾನ್, ಸೈಕಲ್ ರ್ಯಾಲಿ, ಧೂಮಪಾನ ವಿರೋಧಿ ಹಾಗೂ ಮಾದಕದ್ರವ್ಯ ವಿರೋಧಿ ಕಾರ್ಯಕ್ರಮಗಳು, ಕರಪತ್ರ ವಿತರಣೆ, ನಾಟಕ, ಸಾಕ್ಷಚಿತ್ರಗಳ ಪ್ರದರ್ಶನವನ್ನು ಈ ಅಭಿಯಾನ ಒಳಗೊಂಡಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತುಫೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News