ಇಂದು ವಿಕಲಚೇತನರ ಹೆತ್ತವರಿಗೆ ಮಾಹಿತಿ ಶಿಬಿರ
Update: 2016-06-05 00:10 IST
ಉಡುಪಿ, ಜೂ.4: ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ವಿಕಲಚೇತನರ ಸಬಲಿಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಜೂ.5ರಂದು ಈ ಕುರಿತ ಮಾಹಿತಿ ಶಿಬಿರವು ಉಡುಪಿಯ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ನಿರಂಜನ್ ಭಟ್ ಕೇಂದ್ರ ಸರಕಾರ ರೂಪಿಸಿರುವ ನಿರಾಮಯ ವೈದ್ಯಕೀಯ ಇನ್ಯೂರೆನ್ಸ್ ಸೇರಿದಂತೆ ಎಲ್ಲಾ ಯೋಜನೆಗಳ ವಿವರಗಳನ್ನು ನೀಡಲಿದ್ದಾರೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.