ಪ್ಯಾರಿಸ್‌ನಲ್ಲಿ ಬಾರೀ ಮಳೆ, ನೆರೆ: ಲೂವ್ರ್ ಮ್ಯೂಸಿಯಂ ಬಂದ್
ಪ್ಯಾರಿಸ್, ಜೂನ್,5: ಝೀನ್ ನದಿಯ ನೆರೆಯಿಂದಾಗಿ ಪ್ಯಾರಿಸ್‌ನ ಮೆಟ್ರೊ ಸ್ಟೇಶನ್ ಹಾಗೂ ಮ್ಯೂಸಿಯಂಗಳನ್ನು ಮುಚ್ಚಲಾಗಿದೆ. ಲೂವ್ರ್ ಮ್ಯೂಸಿಯಂನಲ್ಲಿ ನೀರಿನ ಮಟ್ಟ ಹದಿನೆಂಟು ಅಡಿಯವರೆಗೂ ಏರಿಕೆಯಾಗಿದ್ದು ಪ್ರಸಿದ್ಧ ಪೈಂಟಿಂಗ್‌ಗಳನ್ನು ಕಲಾವಸ್ತುಗಳನ್ನು ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಾನಾಂತರಿಸಲಾಗಿದೆ.
ಲೂವ್ರ್ ಮ್ಯೂಸಿಯಂನಲ್ಲಿ 2,50,000 ಕಲಾಕೃತಿಗಳಿದ್ದು ಅದನ್ನೀಗ ಬೇರೆ ಸ್ಥಳಕ್ಕೆ ಒಯ್ಯಲಾಗಿದೆ. ಪ್ಯಾರಿಸ್‌ನ ಅಲ್ಮಾ ಸೇತುವೆ ಕೆಳಗಿದ್ದ ಯೋಧ ಝೂವೆಯವರ ಪ್ರತಿಮೆ ಕತ್ತಿನವರೆಗೆ ಮುಳುಗಡೆಯಾಗಿದೆ. ಕೆಲವು ದಿವಸಗಳಿಂದ ನಿರಂತರ ಮಳೆಸುರಿಯುತ್ತಿದ್ದು ಮಳೆಯಿಂದಾಗಿ ಝೀನ್ ನದಿ ತುಂಬಿ ಹರಿದು ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆ ಪ್ರಾನ್ಸ್‌ನಿಂದ ಉಕ್ರೈನ್‌ವರೆಗಿನ ದೇಶಗಳನ್ನು ಬಾಧಿಸಿವೆ ಎಂದು ವರದಿಯಾಗಿವೆ. ಮಳೆಯಿಂದಾಗಿ ಮಧ್ಯ ಯುರೋಪ್‌ನಲ್ಲಿ ಈವರೆಗೆ ಹದಿನೈದು ಮಂದಿ ಮೃತರಾಗಿದ್ದಾರೆ.
ಪ್ರಾನ್ಸ್‌ನಲ್ಲಿ ಇಬ್ಬರೂ ದಕ್ಷಿಣ ಜರ್ಮನಿಯಲ್ಲಿ ಹತ್ತು ಮಂದಿ ಮೃತರಾಗಿದ್ದು ರೊಮೆನಿಯ, ಬೆಲ್ಜಿಯಂ, ನೆದರ್‌ಲೆಂಡ್, ಪೊಲೆಂಡ್‌ಗಳಲ್ಲಿ ಬಾರೀ ಮಳೆಯಾಗಿ ನಾಶ ನಷ್ಟಗಳು ಸಂವಿಸಿವೆ. ಹತ್ತುಸಾವಿರದಷ್ಟು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಮೂವತ್ತು ವರ್ಷಗಳಲ್ಲೇ ಝೀನ್ ನದಿಯಲ್ಲಿ ಕಂಡು ಬಂದ ಅತಿದೊಡ್ಡ ನೆರೆಯಿದೆಂದು ವರದಿಗಳು ತಿಳಿಸಿವೆ.