×
Ad

'ಲ್ಯಾಂಡ್‌ಮಾರ್ಕ್ ಗ್ರಾಂಡ್ ಸಿಟಿ'ಗೆ ಶಿಲಾನ್ಯಾಸ

Update: 2016-06-05 12:55 IST

ಮಂಗಳೂರು, ಜೂ.5: ನಗರದ ಲ್ಯಾಂಡ್‌ಮಾರ್ಕ್ ಇನ್ಫ್ರಾಟೆಕ್ ಸಂಸ್ಥೆಯ ವತಿಯಿಂದ ಪಾಂಡೇಶ್ವರದಲ್ಲಿ ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಮಂಗಳೂರಿನ ಪ್ರಪ್ರಥಮ ಕೇಂದ್ರೀಕೃತ ಹವಾನಿಯಂತ್ರಿತ ವಸತಿ ಸಮುಚ್ಚಯ 'ಲ್ಯಾಂಡ್‌ಮಾರ್ಕ್ ಗ್ರಾಂಡ್ ಸಿಟಿ'ಗೆ ಇಂದು ಶಿಲಾನ್ಯಾಸ ನೆರವೇರಿತು.
ಶಿಲಾನ್ಯಾಸದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಹಸೀಕರಣದ ಮೂಲಕ ಪರಿಸರ ರಕ್ಷಣೆ ಮಾಡುವ ಚಿಂತನೆ ಇದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯಗಳ ಮುಂದೆ ಗಿಡಗಳನ್ನು ಬೆಳೆಸುವ ಮೂಲಕ ಹಸಿರೀಕರಣಕ್ಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಪ್ರತಿ ವಸತಿ ಸಮುಚ್ಚಯ ನಿರ್ಮಾಣದಲ್ಲೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ಪೈಪೋಟಿ ಇದ್ದು, ಸಂಸ್ಥೆಯ ಪ್ರವರ್ತಕ ಜಿ.ಶಬೀರ್ ಅವರ ಕೇಂದ್ರೀಕೃತ ಹವಾನಿಯಂತ್ರಿತ ವಸತಿ ಸಮುಚ್ಚಯದ ಸೌಲಭ್ಯ ಮಾದರಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬ್ರೋಷರ್‌ನ ಅನಾವರಣಗೊಳಿಸಲಾಯಿತು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಲ್ಯಾಂಡ್‌ಮಾರ್ಕ್ ಇನ್ಫ್ರಾಟೆಕ್‌ನ ಪ್ರವರ್ತಕ ಜಿ.ಶಬೀರ್, ಅಬ್ದುಲ್ ಖಾದರ್, ಆರ್ಕಿಟೆಕ್ಟ್ ಮುಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು. ನಿರ್ಮಾಣಗೊಳ್ಳಲಿರುವ ಈ ವಸತಿ ಸಮುಚ್ಚಯದಲ್ಲಿ ನೆಲಮಾಳಿಗೆ ಹಾಗೂ ನೆಲಮಹಡಿ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. 14 ಮಹಡಿಗಳನ್ನು ಒಳಗೊಂಡಿರುವ ಸಮುಚ್ಚಯ 3 ಬಿಎಚ್‌ಕೆಯ 69 ಅಪಾರ್ಟ್‌ಮೆಂಟ್‌ಗಳನ್ನು ಹೊಂದಲಿದೆ. ಪ್ರತಿ ಮಹಡಿಯಲ್ಲಿ 5 ಅಪಾರ್ಟ್‌ಮೆಂಟ್ ಇದ್ದು, ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಜಿ.ಶಬೀರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News