ಅರ್ಮೇನಿಯನ್ ಸಾಮೂಹಿಕ ಕಗ್ಗೊಲೆ, ಜರ್ಮನ್ ಆದ್ಯಾದೇಶಕ್ಕೆ ಸಿಂಧುತ್ವವಿಲ್ಲ !: ಉರ್ದುಗಾನ್
ಅಂಕಾರ, ಜೂನ್ 5: ಅರ್ಮೇನಿಯನ್ ಸಾಮೂಹಿಕ ಕಗ್ಗೊಲೆಯನ್ನು ಜನಾಂಗ ಹತ್ಯೆ ಎಂದು ಅಂಗೀಕರಿಸಿದ ಜರ್ಮನ್ ಆದ್ಯಾದೇಶಕ್ಕೆ ಸಿಂಧುತ್ವವಿಲ್ಲ ಎಂದು ಟರ್ಕಿ ಅಧ್ಯಕ್ಷ ರಬ್ ತಯ್ಯಿಬ್ ಉರ್ದುಗಾನ್ ಹೇಳಿದ್ದಾರೆ. ಸಾಮೂಹಿಕ ಹತ್ಯೆಯನ್ನು ಜನಾಂಗ ಹತ್ಯೆಯಾಗಿ ಪರಿಗಣಿಸುವುದಿಲ್ಲ ಎಂಬ ಟರ್ಕಿಯ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ.
ಆರ್ಮೇನಿಯದ ವಿರುದ್ಧ ನಡೆದ ಯುದ್ಧದಲ್ಲಿ ಸಾವಿರಾರು ಟರ್ಕಿಯ ಸೈನಿಕರು ವಧಿಸಲ್ಪಟ್ಟಿದ್ದಾರೆ. ಆದರೆ ಜರ್ಮನಿಯೊಂದಿಗಿನ ಭಿನ್ನಾಭಿಪ್ರಾಯ ವಿಶಾಲ ಯುರೋಪಿಯನ್ ಯೂನಿಯನ್ ಸಂಬಂಧಕ್ಕೆ ಬಾಧಕವಾಗದು ಎಂದು ಉರ್ದುಗಾನ್ ಸ್ಪಷ್ಟಪಡಿಸಿದ್ದಾರೆ. ಅಂತಹ ನಿಲುವು ಟರ್ಕಿಗೆ ಪ್ರಯೋಜನಕಾರಿಯೂ ಅಲ್ಲ.
ಆದಷ್ಟು ಬೇಗನೆ ಟರ್ಕಿ ವಿರುದ್ಧ ಅವರು ಆರ್ಥಿಕ ದಿಗ್ಬಂಧನ ಹೇರಬಹುದು. ಧಿಕ್ಕಾರಪರವಾದ ನಿಲುವಿನಿಂದಾಗಿ ಜರ್ಮನಿ ಟರ್ಕಿಯಂತಹ ಒಬ್ಬ ಉತ್ತಮ ಸ್ನೇಹಿತನನ್ನು ಕಳಕೊಂಡಿದೆ. ಆದ್ಯಾದೇಶಕ್ಕೆ ಮತ ಹಾಕುವಾಗ ಆಂಗೆಲಾ ಮೊರ್ಕೆಲ್ ದೂರ ಇರುತ್ತಾರೆ ಎಂದು ಭಾವಿಸಿರಲಿಲ್ಲ.
ಇಂತಹ ತೀರ್ಮಾನ ತೆಗೆದ ಜರ್ಮನಿ ಹೇಗೆ ಟರ್ಕಿಯ ಆಡಳಿತಗಾರರ ಮುಖವನ್ನು ನೋಡುತ್ತದೆ ಎಂದು ಉರ್ದುಗಾನ್ ಪ್ರಶ್ನಿಸಿದ್ದಾರೆ. ಸಾಮೂಹಿಕ ಕಗ್ಗೊಲೆಯಲ್ಲಿ ಹದಿನೈದು ಲಕ್ಷ ಮಂದಿ ಕೊಲೆಯಾಗಿದ್ದಾರೆ ಎಂದು ಆರ್ಮೇನಿಯ ವಾದಿಸುತ್ತಿದೆ.