ಕಾಸರಗೋಡು: ಲಾರಿಗಳ ಮುಖಾಮುಖಿ ಢಿಕ್ಕಿ
Update: 2016-06-05 15:19 IST
ಕಾಸರಗೋಡು,ಜೂ.5:ಚೆರ್ಕಳ ಸಮೀಪದ ಬೇವಿಂಜೆ ಸ್ಟಾರ್ ನಗರದಲ್ಲಿ ಎರಡು ಲಾರಿಗಳು ಪರಸ್ಪರ ಢಿಕ್ಕಿಹೊಡೆದ ಘಟನೆಸಂಭವಿಸಿದೆ. ಕಾಞಂಗಾಡ್ನಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ಲಾರಿ ಹಾಗೂ ಪೊಯಿನಾಚಿ ಭಾಗಕ್ಕೆ ಹೊಯ್ಗೆಸಾಗಿಸುತ್ತಿದ್ದ ಲಾರಿ ಪರಸ್ಪರ ಢಿಕ್ಕಿಹೊಡೆದಿದೆ. ಇದರಿಂದ ಯಾರೂ ಗಾಯಗೊಂಡಿಲ್ಲ. ಆದರೆ ಒಂದು ಗಂಟೆ ಕಾಲ ಹೆದ್ದಾರಿಯಲ್ಲಿವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಯಾಯಿತು. ಅಪಘಾತದಿಂದ ಒಂದು ಲಾರಿಯ ಡೀಸೆಲ್ ಟ್ಯಾಂಕ್ ನಿಂದ ಡೀಸೆಲ್ ರಸ್ತೆಗೆಹರಿದುಹೋಗಿದ್ದು, ಇದನ್ನು ಅಗ್ನಿಶಾಮಕದಳ ಶುಚೀಕರಿಸಿದ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭಗೊಂಡಿತು.