ಸ್ವಚ್ಛತೆಯಲ್ಲಿ ಸುಳ್ಯ ದೇಶಕ್ಕೆ ಮಾದರಿ: ಸಂಸದ ನಳಿನ್
ಸುಳ್ಯ, ಜೂ.5: ದೇಶವನ್ನು ಸ್ವಚ್ಛ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಅವರ ಯೋಜನೆಗೆ ದೇಶದ ಎಲ್ಲ ಸಮುದಾಯದವರೂ ಕೈ ಜೋಡಿಸಿದ್ದಾರೆ ಎಂದು ಲೋಕಸಬಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ನಮ್ಮ ಸುಳ್ಯ-ಸ್ವಚ್ಛ ಸುಳ್ಯ ಪರಿಕಲ್ಪನೆಯಡಿ ಸುಳ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಳ್ಯದ ಜ್ಯೋತಿ ಸರ್ಕಲ್ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಎಸ್.ಅಂಗಾರ ಮಾತನಾಡಿ, ಸ್ವಚ್ಛತೆ ಘೋಷಣೆಯಲ್ಲೇ ಉಳಿಯಬಾರದು. ಘೋಷಣೆ ನಮಗೆ ಸ್ವಚ್ಛತೆಯಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ಸಿಗುವಂತಾಗಬೇಕು. ಪ್ರತಿಯೊಬ್ಬರು ಈ ಕಾರ್ಯಗಳಲ್ಲಿ ತೊಡಗಿಸಿಕೊಂಡು ದಿನ ನಿತ್ಯವೂ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಚ್ಛ ಸುಳ್ಯದ ರಾಯಭಾರಿ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಿದ್ದರು .
ವಿನಯಕುಮಾರ್ ಕಂದಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಜಿ.ಪಂ.ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಶ್ರೀಮತಿ ಪುಷ್ಪಾವತಿ ಬಾಳಿಲ,ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು. ನ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರುಗಳಾದ ಎನ್.ಎ.ರಾಮಚಂದ್ರ, ಗೋಪಾಲ ಎಸ್ ನಡುಬೈಲು, ಗಿರೀಶ್ ಕಲ್ಲಗದ್ದೆ, ಕೆ.ಎಂ.ಮುಸ್ತಪ, ಕಿರಣ ಕುರುಂಜಿ, ಹರಿಣಾಕ್ಷಿ ನಾರಾಯಣ, ಪ್ರೇಮಾ ಟೀಚರ್, ಜಾನಕಿ ನಾರಾಯಣ, ಸುನಿತಾ ಡಿ’ಸೋಜಾ, ಶೀಲಾವತಿ, ಕ.ಸಾ.ಪ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಅಕ್ಷ್ ಕೆ.ಸಿ. ಕುರುಂಜಿ , ಹರೀಶ್ ರೈ ಉಬರಡ್ಕ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಜನಾರ್ದನ ದೋಳ, ಸುಂದರ ರಾವ್ ರೂಪಾ, ಡಾ ಎನ್.ಎ.ಜ್ಞಾನೇಶ್, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ, ಡಾ ಹರಪ್ರಸಾದ್ ತುದಿಯಡ್ಕ, ಬೆಳ್ಳಿಯಪ್ಪ ಗೌಡ, ಜಗನ್ನಾಥ ರೈ ಜ್ಯೋತಿ, ಬಾಲಗೋಪಾಲ ಸೇರ್ಕಜೆ, ಡಿ.ಎಸ್. ಗಿರೀಶ್, ಸ್ಟುಡಿಯೋ ಗೋಪಾಲ, ಗಣೇಶ್ ಟ್ ಸಿ.ಎ., ಹಾಜಿ ಅಬ್ಬಾಸ್ ಕಟ್ಟೆಕಾರ್, ಬಾಪು ಸಾಹೇಬ್, ಜೀವನ್ ರಾಂ ಸುಳ್ಯ, ಡಾ. ಶ್ರೀಕೃಷ್ಣ ಟ್, ಉಮೇಶ್ ವಾಗ್ಲೆ, ಕರುಣಾಕರ ಅಡ್ಪಂಗಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ, ಪಶು ಸಂಗೋಪನಾಧಿಕಾರಿ ಪ್ರಸನ್ನ ಪಿ.ಜಿ., ತಾಲೂಕು ಆರೋಗ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ಕೆ.ಸಿ.ಸದಾನಂದ, ಶಿವರಾಮ ಕೆ.ವಿ.ಜಿ.ಪಿ., ಬೂಡು ರಾಧಾಕೃಷ್ಣ ರೈ, ಮಮತಾ ಪುರುಷೋತ್ತಮ, ಜತ್ತಪ್ಪ ರೈ ಲ್ಯಾಂಪ್, ಮನಮೋಹನ ಬಳ್ಳಡ, ಭೀಮರಾವ್ ವಾಷ್ಠರ್, ಗಂಗಾಧರ ಕುರುಂಜಿ, ಪ್ರೊ. ಗಿರಿಧರ ಗೌಡ, ಡಾ.ಎನ್.ಎಸ್.ಶೆಟ್ಟರ್, ಲೋಕೇಶ್ ಕೆರೆಮೂಲೆ, ಮನೋಜ್ ಕೇರ್ಪಳ, ವೆಂಕಟ್ರಮಣ ಅತ್ಯಾಡಿ, ಕೆ.ಆರ್.ಮನಮೋಹನ, ರಾಜೇಶ್ ಕುರುಂಜಿಗುಡ್ಡೆ, ಬಿ.ಎಸ್.ಶರೀಪ್, ದಾಮೋದರ ಮಂಚಿ, ನವೀನ್ ರೈ ಮೇನಾಲ, ಮಹೇಶ್ ರೈ ಮೇನಾಲ, ಮಲ್ಲೇಶ್ ಬೆಟ್ಟಂಪಾಡಿ, ಕೃಷಿ ಇಲಾಖೆಯ ಮೋಹನ್ ನಂಗಾರು ಮೊದಲಾದವರು ಭಾಗವಹಿಸಿದ್ದರು.