ಸುಳ್ಯ ಲಯನ್ಸ್ ಕ್ಲಬ್‌ಗೆ ಪ್ರಶಸ್ತಿ
ಸುಳ್ಯ, ಜೂ.5 ಇತ್ತೀಚೆಗೆ ಬೆಂಗಳೂರಿನಲ್ಲಿ ಜರಗಿದ ಎರಡು ದಿನಗಳ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್‌ನ ಮಲ್ಟಿಪಲ್ ಜಿಲ್ಲೆ 317 ಇದರ ಸಮಾವೇಶದಲ್ಲಿ ಸುಳ್ಯ ಲಯನ್ಸ್ ಕ್ಲಬ್‌ಗೆ ಎರಡು ಮಲ್ಟಿಪಲ್ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರು ವಿಜಯನಗರದ ಬಂಟ್ಸ್ ಸಭಾವನದಲ್ಲಿ ಜರಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸದಸ್ಯತನ ಬೆಳವಣಿಗೆಯಲ್ಲಿ ಮಲ್ಟಿಪಲ್ ಜಿಲ್ಲೆಯ ದ್ವಿತೀಯ ಪ್ರಶಸ್ತಿ ಹಾಗೂ 2015-16ನೆ ಸಾಲಿನ ಅಮೋಘ ಸಾಧನೆ ಹಾಗೂ ಸೇವಾ ಕಾರ್ಯಕ್ರಮಗಳಿಗಾಗಿ ಲಯನ್ಸ್ ಅಂತಾರಾಷ್ಟ್ರೀಯ ಅಧ್ಯಕ್ಷರ ವಿಶೇಷ ಪುರಸ್ಕಾರ ಪ್ರಶಸ್ತಿಗಳನ್ನು ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ಪಿಎಂಜೆಎಪ್ ಆರ್. ಮುರುಗನ್‌ರಿಂದ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಂ ದೇರಪ್ಪಜ್ಜನಮನೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನಿಕಟಪೂರ್ವ ನಿರ್ದೇಶಕ ವಿ.ವಿ. ಕೃಷ್ಣಾರೆಡ್ಡಿ, ಮಲ್ಟಿಪಲ್ ಕಮಿಟಿ ಚೆಯರ್‌ಪರ್ಸನ್ ಪಿ.ಎನ್. ಸತ್ಯಪ್ರಕಾಶ್ ಉಪಾಧ್ಯಾಯ, ಲಯನ್ ಜಿಲ್ಲೆ 317-ಡಿ ರಾಜ್ಯಪಾಲೆ ಕವಿತಾ ಶಾಸ್ತ್ರಿ, ಮಾಜಿ ಜಿಲ್ಲಾ ರಾಜ್ಯಪಾಲರಾದ ಸಂತೋಷ್‌ಕುಮಾರ್ ಶಾಸ್ತ್ರಿ, ಎಂ.ಬಿ. ಸದಾಶಿವ ಮತ್ತು ಮಾಜಿ ವಲಯಾಧ್ಯಕ್ಷ ನಳಿನ್‌ಕುಮಾರ್ ಕೋಡ್ತುಗುಳಿ ಉಪಸ್ಥಿತರಿದ್ದರು.