×
Ad

ಉಪ್ಪಳ: ಸರಣಿ ಅಪಘಾತ; ಐವರು ಮಕ್ಕಳು ಆಸ್ಪತ್ರೆಗೆ

Update: 2016-06-05 18:52 IST

ಮಂಜೇಶ್ವರ, ಜೂ.5: ಮಂಗಳೂರು ಕಡೆಗೆ ತೆರಳುತ್ತಿದ್ದ ಮೂರು ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಉಂಟಾದ ಸರಣಿ ಅಪಘಾತದಲ್ಲಿ ಐದು ಮಂದಿ ಬಾಲಕ, ಬಾಲಕಿಯರು ಗಾಯಗೊಂಡ ಘಟನೆ ಉಪ್ಪಳ ಸಮೀಪದ ಮಂಗಲ್ಪಾಡಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಲಾರಿಯೊಂದು ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆಯಿತು. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ಅದರ ಮುಂದೆ ಸಂಚರಿಸುತಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ.

ಮೊದಲು ಢಿಕ್ಕಿ ಹೊಡೆದ ಕಾರಲ್ಲಿದ್ದ ಮೇಲ್ಪರಂಬ ಸಾದಿಖ್ ಎಂಬವರ ಪುತ್ರಿ ಪರ್ಝಿನ್ (8), ಮರ್ಷಿಯ (10),ಝೈನಬ (2), ಸಂಬಂಧಿಕರಾದ ಆದಿಲ್ (9) ಹಾಗೂ ಜನ್ನತ್ (7) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News