‘ಪ್ರೊ ವ್ಹೀಲ್ಸ್ ಕಾರ್ ಕೇರ್’ ಶುಭಾರಂಭ
Update: 2016-06-05 19:13 IST
ಮಂಗಳೂರು, ಜೂ.5: ನಗರದ ಫಳ್ನೀರ್ ರಸ್ತೆಯ ಇಂದಿರಾ ಆಸ್ಪತ್ರೆ ಬಳಿಯಲ್ಲಿ ನೂತನ ವರ್ಕ್‌ಶಾಪ್ ‘ಪ್ರೊ ವ್ಹೀಲ್ಸ್ ಕಾರ್ ಕೇರ್’ ಇಂದು ಶುಭಾರಂಭಗೊಂಡಿತು.
ನೂತನ ವರ್ಕ್‌ಶಾಪ್‌ನ ಉದ್ಘಾಟನೆಯನ್ನು ಕಣಚೂರ್ ಗ್ರೂಪ್ ಆಫ್ ಕಂಪೆನೀಸ್‌ನ ಅಧ್ಯಕ್ಷ ಕಣಚೂರ್ ಮೋನು ನೆರವೇರಿಸಿದರು.
ಮಂಗಳೂರು ನಗರ ಸಂಚಾರ ಎಸಿಪಿ ಉದಯ ಎಂ.ನಾಯಕ್, ಕಾರ್ಪೊರೇಟರ್ ಅಬ್ದುಲ್ ರವೂಫ್, ‘ಪ್ರೊ ವ್ಹೀಲ್ಸ್ ಕಾರ್ ಕೇರ್’ ಮಾಲಕ ಹಿಶಾಮ್ ರಶೀದ್, ಅವರ ತಂದೆ ರಶೀದ್ ಸಾಹೇಬ್, ಮಧು ಇಕ್ವಿಪ್‌ಮೆಂಟ್ ಸಂಸ್ಥೆಯ ಪ್ರತಿನಿಧಿ ಪ್ರಭು ಜಿ., ಮೈ ಟೈರ್ ಪಾಂಟ್‌ನ ರಿಮಿತ್ ಉಪಸ್ಥಿತರಿದ್ದರು.
ವಿವಿಧ ಶ್ರೇಣಿಯ ಟೈರ್‌ಗಳ ಮಾರಾಟ, ವ್ಹೀಲ್ ಅಲೈನ್‌ಮೆಂಟ್, ವ್ಹೀಲ್ ಬ್ಯಾಲೆನ್ಸಿಂಗ್, ಆಟೊಮೆಟಿಕ್ ಟೈರ್ ಚೇಂಜರ್, 3ಎಂ ಕಾರ್ ವಾಶ್, ಏರ್ ಕಂಡಿಷನರ್ ಟ್ರೀಟ್‌ಮೆಂಟ್, ಕಾರ್ ಇನ್ಸೂರೆನ್ಸ್, ಎಮಿಶನ್, ಕಾರ್ ಅಕ್ಸೆಸ್ಸರೀಸ್ ಮೊದಲಾದ ಸೇವೆಗಳು ಲಭ್ಯವಿದೆ.