ಸೋಮವಾರದಿಂದ ರಂಝಾನ್ ಉಪವಾಸ ಆರಂಭ
Update: 2016-06-05 19:43 IST
ಮಂಗಳೂರು, ಜೂ.5: ಕೇರಳದ ಕಾಪಡ್‌ನಲ್ಲಿ ಇಂದು ಚಂದ್ರದರ್ಶನ ಆಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ರಂಝಾನ್ ಉಪವಾಸ ಆಚರಣೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಘೋಷಿಸಿರುವುದಾಗಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.